SUNG AS SHREEKRISHNA ANKITA
ನಿನಗಾರು ಸರಿಯಿಲ್ಲ ಎನಗನ್ಯ ಗತಿಯಿಲ್ಲ
ನಿನಗೂ ಎನಗೂ ನ್ಯಾಯ ಹೇಳುವರಿಲ್ಲೋ ||
ಒಂದೇ ಗೂಡಿನಲ್ಲಿದ್ದು ಒಂದು ಕ್ಷಣವಗಲದೆ
ಎಂದೆಂದಿಗೂ ನಿನ್ನ ಪೊಂದಿರುವೆ
ಬಂಧ ವಿಷಯಗಳಿಗೆನ್ನನೊಪ್ಪಿಸುವುದು
ಇಂದು ನಿನಗೆ ಇದು ಉಚಿತವಲ್ಲವೊ ದೇವ ||
ಪರಸತಿಗಳುಕಲು ಪರಮಪಾಪಿಷ್ಠನೆಂದು
ಪರಿಪರಿ ನರಕಕ್ಕೆ ಸೇರಿಸುವೆ
ಪರಸತಿಯರೊಲುಮೆ ನಿನಗೆ ಒಪ್ಪಿತೊ ದೇವ
ದೊರೆತನಕಂಜಿ ನಾ ಶರಣೆಂಬೆನಲ್ಲದೆ |
ನಿನ್ನ ಧ್ಯಾನವನು ನಾ ನಿನ್ನ ಪ್ರೇರಣೆಯಿಂದ
ಅನಂತಕರ್ಮವನು ನಾ ಮಾಡಿದೆ
ಇನ್ನಾದರು ಎನ್ನ ದಯದಿಂದ ನೋಡಯ್ಯ
ಪನ್ನಗಶಯನ ಪುರಂದರವಿಠಲ ಕೃಷ್ಣ ||
****
ರಾಗ ಕೇದಾರಗೌಳ ತ್ರಿಪುಟತಾಳ (raga, taala may differ in audio)
No comments:
Post a Comment