Showing posts with label ಆರೋಗಣೆ ಮಾಡೊ ಆನಂದ ಮೂರುತಿ hayavadana AAROGANE MAADO AANANDA MOORUTI. Show all posts
Showing posts with label ಆರೋಗಣೆ ಮಾಡೊ ಆನಂದ ಮೂರುತಿ hayavadana AAROGANE MAADO AANANDA MOORUTI. Show all posts

Saturday, 11 December 2021

ಆರೋಗಣೆ ಮಾಡೊ ಆನಂದ ಮೂರುತಿ ankita hayavadana AAROGANE MAADO AANANDA MOORUTI


ಆರೋಗಣೆ ಮಾಡೊ ಆನಂದಮೂರುತಿ ಪ.


ರÀನ್ನದ ತಳಿಗೆಯನ್ನು ಶೋಭನವಾದ

ಪೊನ್ನ ಬಟ್ಟಲುಗಳ ನೆರವಿ ಶ್ರೀಹರಿಗೆ

ನಿನ್ನರಸಿ ಆ ಲಕ್ಷ್ಮಿ ಸೊಸೆಯರ ಕೂಡಿ ಶಾ-

ಲ್ಯನ್ನ ಸವಿಶಾಕಗಳ ನೀಡಿದ ಕೈಯಿಂದ 1


ತುಪ್ಪ ಮಧು ಚಿತ್ರಾನ್ನ ಪಾಯಸ ಕರಿಗಳ

ಲೇಪ ಸಾರಸ ಭಕ್ಷ್ಯಗಳ

ಗೋಪಾಲಕೃಷ್ಣಗೆ ದಧಿ ಪಕ್ವಫಲಂಗಳು

ಆ ಪದ್ಮಮುಖಿ ಬಡಿಸಿದಳು ಲೇಹ್ಯಪೇಹ್ಯವ 2


ಎನ್ನ ಕುಂದುಗಳಾಮುನಿಗೆ ದಿವ್ಯ ಅನ್ನವೊ

ಮನ್ನಿಸಿ ಕರೆದು ನಿನ್ನ ಕರಕಂಜದಿಂದ

ಪೂರ್ಣವಮಾಡು ಭುಜಿಸೊ ಹಯವದನ ಕೃ-

ಪಾಳು ಸಕಲಲೋಕಪಾಲ ಸುರರೊಡೆಯನೆ 3

***