Showing posts with label ರಾಮ ಧ್ಯಾನ ಸುತೀರ್ಥರ ಸ್ಮರಿಸುತ ಕಾಮಿತವನು ಪಡಿಯೋ karpara narahari. Show all posts
Showing posts with label ರಾಮ ಧ್ಯಾನ ಸುತೀರ್ಥರ ಸ್ಮರಿಸುತ ಕಾಮಿತವನು ಪಡಿಯೋ karpara narahari. Show all posts

Monday, 2 August 2021

ರಾಮ ಧ್ಯಾನ ಸುತೀರ್ಥರ ಸ್ಮರಿಸುತ ಕಾಮಿತವನು ಪಡಿಯೋ ankita karpara narahari

ರಾಮ ಧ್ಯಾನ ಸುತೀರ್ಥರ ಸ್ಮರಿಸುತ

ಕಾಮಿತವನು ಪಡಿಯೋ ಪ


ಈ ಮಹಿಯೊಳು ರಘುವೀರ ತೀರ್ಥರ ಕರ-

ತಾಮರಸೋದ್ಭವರೆನಿಸಿ ಮೆರೆದ ಗುರು ಅ.ಪ


ಧರೆಸುತ ಮಂಡಿತ ಸುರಪುರದಲಿ ದ್ವಿಜ

ವರ ಕುಲದಲಿ ಜನಿಸಿಯಳಿಮೇ-

ಲಾರ್ಯರ ಬಳಿಯಲಿ ಶಬ್ದಾವಳಿ

ಶಾಸ್ತ್ರವ ಪಠಿಸಿ ಇಳಿಸುರನುತ

ರಘುವೀರತೀರ್ಥ ಕರ ಜಲಜೋದ್ಭವ

ರೆನಿಸಿ ಕಲಿತು ಗುರುಮುಖದಿ

ಮರುತ ಶಾಸ್ತ್ರವನು ತಿಳಿಸುತ ಬುಧಜನ

ರೊಲಿಸಿದಂಥ ಗುರು 1


ಹೇಮಮಂಟಪದಿ ಭೂಮಿ ಸುತಾನ್ವಿತ

ರಾಮನ ಪೂಜಿಸು ತಾ ಶ್ರೀಮನ್ಮಧ್ವಕ

ರಾಬ್ಜಾದಾಗತ ಸೌಮಿತ್ರಿಯ ಸಹಿತ

ಸಾಮವ ಪಠಿಸುವ ಭೂಮಿಸುರಜನ

ಸ್ತೋಮದಿ ಶೋಭಿಸುತ ಧೀಮಜನರಿಗೆ

ಪ್ರೇಮದಿಂದ ಮೃಷ್ಟಾನ್ನದಾನ ಸನ್ಮಾನ

ಮಾಡುತಿಹ 2


ಭೂತಳದಲಿ ಸುಕ್ಷೇತ್ರ ಬಹು ಆರ್ಥ

ಯಾತ್ರಿಗಳಾ ಚರಿಸಿ ಭೂತಬಾಧೆ

ರೋಗಾತುರ ಜನಗಳ ಭೀತಿಯ ಪರಿಹರಿಸಿ

ಶಾಸ್ತ್ರಸುಧಾರಸ ಸತ್ಯಮೋದ ಯತಿ-

ನಾಥರಿಂದ ಗ್ರಹಿಸಿ ಖ್ಯಾತ ಕಾರ್ಪರ

ಕ್ಷೇತ್ರದಿ ನರಮೃಗನಾಥನ ಪ್ರೀತಿಗೆಪಾತ್ರರೆನಿಸಿರುವ 3

****