ರಾಮ ಧ್ಯಾನ ಸುತೀರ್ಥರ ಸ್ಮರಿಸುತ
ಕಾಮಿತವನು ಪಡಿಯೋ ಪ
ಈ ಮಹಿಯೊಳು ರಘುವೀರ ತೀರ್ಥರ ಕರ-
ತಾಮರಸೋದ್ಭವರೆನಿಸಿ ಮೆರೆದ ಗುರು ಅ.ಪ
ಧರೆಸುತ ಮಂಡಿತ ಸುರಪುರದಲಿ ದ್ವಿಜ
ವರ ಕುಲದಲಿ ಜನಿಸಿಯಳಿಮೇ-
ಲಾರ್ಯರ ಬಳಿಯಲಿ ಶಬ್ದಾವಳಿ
ಶಾಸ್ತ್ರವ ಪಠಿಸಿ ಇಳಿಸುರನುತ
ರಘುವೀರತೀರ್ಥ ಕರ ಜಲಜೋದ್ಭವ
ರೆನಿಸಿ ಕಲಿತು ಗುರುಮುಖದಿ
ಮರುತ ಶಾಸ್ತ್ರವನು ತಿಳಿಸುತ ಬುಧಜನ
ರೊಲಿಸಿದಂಥ ಗುರು 1
ಹೇಮಮಂಟಪದಿ ಭೂಮಿ ಸುತಾನ್ವಿತ
ರಾಮನ ಪೂಜಿಸು ತಾ ಶ್ರೀಮನ್ಮಧ್ವಕ
ರಾಬ್ಜಾದಾಗತ ಸೌಮಿತ್ರಿಯ ಸಹಿತ
ಸಾಮವ ಪಠಿಸುವ ಭೂಮಿಸುರಜನ
ಸ್ತೋಮದಿ ಶೋಭಿಸುತ ಧೀಮಜನರಿಗೆ
ಪ್ರೇಮದಿಂದ ಮೃಷ್ಟಾನ್ನದಾನ ಸನ್ಮಾನ
ಮಾಡುತಿಹ 2
ಭೂತಳದಲಿ ಸುಕ್ಷೇತ್ರ ಬಹು ಆರ್ಥ
ಯಾತ್ರಿಗಳಾ ಚರಿಸಿ ಭೂತಬಾಧೆ
ರೋಗಾತುರ ಜನಗಳ ಭೀತಿಯ ಪರಿಹರಿಸಿ
ಶಾಸ್ತ್ರಸುಧಾರಸ ಸತ್ಯಮೋದ ಯತಿ-
ನಾಥರಿಂದ ಗ್ರಹಿಸಿ ಖ್ಯಾತ ಕಾರ್ಪರ
ಕ್ಷೇತ್ರದಿ ನರಮೃಗನಾಥನ ಪ್ರೀತಿಗೆಪಾತ್ರರೆನಿಸಿರುವ 3
****
No comments:
Post a Comment