Showing posts with label ಔಪಾಸನವ ಮಾಡು ದಾಸ ನಾನೆಂದು ankita prasannavenkata AUPASANAVA MADU NAANENDU. Show all posts
Showing posts with label ಔಪಾಸನವ ಮಾಡು ದಾಸ ನಾನೆಂದು ankita prasannavenkata AUPASANAVA MADU NAANENDU. Show all posts

Saturday, 10 April 2021

ಔಪಾಸನವ ಮಾಡು ದಾಸ ನಾನೆಂದು ankita prasannavenkata AUPASANAVA MADU NAANENDU

 

Audio by Vidwan Sumukh Moudgalya


ಶ್ರೀ ಪ್ರಸನ್ನವೆಂಕಟದಾಸರ ನವ ವಿಧ ಭಕ್ತಿ ಕೀರ್ತನೆಗಳು


 ೭ . " ಉಪಾಸನಾ ಭಕ್ತಿ ( ದಾಸ್ಯ )


 ರಾಗ : ಕಲ್ಯಾಣಿ   ಆದಿತಾಳ


ಔಪಾಸನವ ಮಾಡು ದಾಸ ನಾನೆಂದು

ಶ್ರೀಪತಿದಾಸಧರ್ಮವೆ ಮೋಕ್ಷವೆಂತೆಂದು ॥ಪ॥


ವನಿತೆ ಮಹಾಲಕುಮಿ ದಾಸಿ , ಮುಕ್ತಾಮುಕ್ತ

ಗಣವೆಲ್ಲ ಹರಿದಾಸರು

ಹನುಮತ್ ಸ್ವಾಮಿಯು ರಾಮದಾಸತ್ವದ ಭಾಗ್ಯ-

ವನು ಹೊಂದಿ ವಿರಿಂಚಿಪದವಿಯ ಪಡೆದನು ॥೧॥


ಅನಾದ್ಯನಂತಕಾಲಾ , ಸಂಸ್ಕೃತಿಯಲ್ಲಿ

ಆನಂದವನು ಮುಕ್ತಿಲಿ

ನೀನೆಂದಿಗೂ ಸ್ವಾಮಿ ನಾನು ಭೃತ್ಯರ ಭೃತ್ಯ

ಅನಿಮೇಷರೆಲ್ಲ ನಿನ್ನೊಳಿಗದವರೆಂದು ॥೨॥


ದಾರಾಪತ್ಯಾದಿ ಬಳಗ, ದಾಸದಾಸರು

ನಾರಾಯಣ ದೇವನಾ

ವಾರವರ ಯೋಗ್ಯತೆ ಸಾರ ಸಂಬಳ ಸೇವೆ

ಮೀರದೀವ ದೀನೋದ್ಧಾರ ಕೃಷ್ಣನೆಂದು ॥೩॥


ಕರಣತ್ರಯಗಳಿಂದ, ನಿರಂತರ

ಮರೆಯದೂಳಿಗವ ಮಾಡಿ

ಸಿರಿದಾರಿದ್ರ್ಯತೆಗಳಿಗ್ಹಿಗ್ಗಿ ಕುಗ್ಗದೆ

ಪರಮಭಕುತಿಭಾಗ್ಯ ದೊರಕಿದುಲ್ಲಾಸದಿ ॥೪॥


ದುರಿತಕೋಟಿಗಂಜದೆ, ಸಾಧುನಿಕರ

ಪರಿಯ ಸೇವಯ ಬಿಡದೆ

ವರವಿರತಿಜ್ಞಾನ ಭಕ್ತಿಲಿ ಪ್ರಸನ್ವೆಂಕಟ

ಹರಿಕೊಟ್ಟಷ್ಟೆ ಪರಮ ಸಂಬಳ ಸಾಕೆಂದು ॥೫॥

****

by ಪ್ರಸನ್ನವೆಂಕಟದಾಸರು
ಔಪಾಸನವಮಾಡುದಾಸ ನಾನೆಂದು ಶ್ರೀಪತಿದಾನ ಧರ್ಮವೆ ಮೋಕ್ಷವೆಂತೆಂದೂ ಪ.

ವನಿತೆ ಲಕುಮಿಯು ದಾಸಿ ಮುಕ್ತಾಮುಕ್ತಗಣವೆಲ್ಲ ಹರಿದಾಸರುಹನುಮತ್ ಸ್ವಾಮಿಯು ರಾಮದಾಸತ್ವದ ಭಾಗ್ಯವನು ಹೊಂದಿವಿರಿಂಚಿಪದವಿಯ ಪಡೆದನು1

ಅನಾದ್ಯನಂತಕಾಲಸಂಸೃತಿಯಲ್ಲಿಆನಂದವು ಮುಕ್ತಿಲಿನೀನೆಂದಿಗು ಸ್ವಾಮಿ ನಾನು ಭೃತ್ಯರಭೃತ್ಯಅನಿಮಿಷರೆಲ್ಲ ನಿನ್ನೂಳಿಗದವರೆಂದು 2

ದಾರಾಪತ್ಯಾದಿ ಬಳಗ ದಾಸಿ ದಾಸರುನಾರಾಯಣ ದೇವನವರವರ ಯೋಗ್ಯತೆಸಾರಸಂಬಳ ಸೇವೆಮೀರದೀವ ದೀನೋದ್ಧಾರ ಕೃಷ್ಣನೆಂದು 3

ಕರಣತ್ರಯಗಳಿಂದ ನಿರಂತರಮರೆಯೂಳಿಗವ ಮಾಡಿಸಿರಿದಾರಿದ್ರ್ರ್ಯತೆಗಳಿಗ್ಹಿಗ್ಗಿ ಕುಗ್ಗದೆಪರಮಭಕುತಿ ಭಾಗ್ಯ ದೊರಕಿದುಲ್ಲಾಸದಿ4

ದುರಿತಕೋಟಿಗಂಜದೆ ಸಾಧುನಿಕರಹರಿಯ ಸೇವೆಯ ಬಿಡದೆವರವಿರತಿ ಜ್ಞಾನ ಭಕ್ತಿಲಿ ಪ್ರಸನ್ವೆಂಕಟಹರಿಕೊಟ್ಟಷ್ಟೆ ಪರಮಸಂಬಳ ಸಾಕೆಂದು5
****