Showing posts with label ಕುಣಿದ ಕಾಳಿಯ ಶಿರದಿ ನಂದನಂದನು prasannavenkata. Show all posts
Showing posts with label ಕುಣಿದ ಕಾಳಿಯ ಶಿರದಿ ನಂದನಂದನು prasannavenkata. Show all posts

Monday, 11 November 2019

ಕುಣಿದ ಕಾಳಿಯ ಶಿರದಿ ನಂದನಂದನು ankita prasannavenkata

by ಪ್ರಸನ್ನವೆಂಕಟದಾಸರು
ಕುಣಿದ ಕಾಳಿಯ ಶಿರದಿ ನಂದನಂದನು ಪ.

ಕಿರುಗೆಜ್ಜೆ ಕಾಲಂದಿಗೆ ಕಟಿಯವರದಾಮದ ಪೊಂಗಂಟೆರವದಕರಕಂಕಣಮುದ್ರಿಕೆಹಾರಪದಕಾಭರಣಝಣ ಝಣ ಝಣ ಝಣ ಝಣ ಝಣಝಣ ಝಣಕೆನ್ನಲು 1

ವಿಗಡಾಹಿ ಫಣದಲ್ಲಿನಿಂದುಕರಗಳೊಲವಿಲಿ ಅಭಿನವ ತೋರುತಲಿನಗೆಮೊಗದಮೃತ ರುಚಿಗಳ ಬೀರಿ ತೋಧಿಗಿ ಧಿಗಿ ಧಿಗಿ ಧಿಗಿ ಧಿಗಿ ಧಿಗಿ ಧಿಗಿ ಧಿಗಿ ಥೈ ಥೈಯೆಂದು 2

ಪದುಮಜಭವರು ಹನುಮ ಮೂರು ಜತ್ತಾಳ್ಮುದದಿಂ ದಂಡಿಗೆ ತಾಳ್ಗತಿ ನುಡಿಸೆಪದುಮನಾಭ ಪ್ರಸನ್ನವೆಂಕಟ ಕೃಷ್ಣ ತಕುಂದಕುಂತ ಗಡ ವಗಧಾಂ ಕಿಡಿ ಕಿಡಿಧಾಯೆಂದು3
********