Showing posts with label ಕೇಳಿ ಪೇಳಮ್ಮ ನಮ್ಮಮ್ಮ ಲಕುಮೀ indiresha. Show all posts
Showing posts with label ಕೇಳಿ ಪೇಳಮ್ಮ ನಮ್ಮಮ್ಮ ಲಕುಮೀ indiresha. Show all posts

Friday 27 December 2019

ಕೇಳಿ ಪೇಳಮ್ಮ ನಮ್ಮಮ್ಮ ಲಕುಮೀ ankita indiresha

ಕೇಳಿಪೇಳಮ್ಮ ನಮ್ಮಮ್ಮ ಲಕುಮೀ ||

ಕೇಳಿಪೇಳೆ ಹರಿಯಲಿ ಪೋಗಿ ಬಹಳ ಸೋಕಿನವ ಗೋಪಿಬಾಲೀಯರಿಗೆ
ಮೆಚ್ಚಿ ಬಹು ಜಾಲವ ಮಾಡಿದ ಕೃಷ್ಣನ ||

ಪ್ರಳಯ ಕಾಲದಲ್ಲಿ ಆಲದೆಲೆ ಮೇಲೆ ಮಲಗಿಪ್ಪನುಒಲುಮಿಗಳ
ಒಲುಮಿಕಾಂತ ಲಲನೆ ನೀನು ಕಮಲಾದೇವಿ ||

ನಿತ್ಯಮುಕ್ತೆ ನಿತ್ಯತೃಪ್ತೆ ನಿತ್ಯಾವಿಯೋಗಿನಿ ಹರಿಗೆ
ಭೃತ್ಯನಲ್ಲೆ ನಾನು ಸ್ವಲ್ಪ ಚಿತ್ತವಿಟ್ಟು ನೋಡೆ ತಾಯಿ ||

ನಿನ್ನ ಹೊರತು ಆತನನ್ನು ತೋರುವರ ಕಾಣೆನಮ್ಮಸನ್ನುತಾಂಗಿ
ಸಾರಸಾಕ್ಷಿ ಎನ್ನೊಳು ಕರುಣವ ಮಾಡೇ ||

ಎಲ್ಲ ದಿವಿಜರಲ್ಲಿ ಪೋಗೆ ಬಲುಬಗೆ ಪೇಳಿಕೊಂಡೆ
ಫುಲ್ಲನಾಭನಲ್ಲಿ ಒಂದು ಸೊಲ್ಲನಾಡೋ ಶಕ್ತಿಯಿಲ್ಲ ||

ವಾರಿಜಾಕ್ಷಿ ನಿನ್ನ ಪಾದ ಬಾಲ್ಯದಿಂದ ಸೇರಿದ್ದಕ್ಕೆ
ನೀರಜಾಕ್ಷನನ್ನು ತೋರೆ ಭಾರಿ ಫಲವಾಯಿತೆಂಬೆ ||

ನಿಮ್ಮ ಮಾತು ಮೀರ ಶೂರ ನಮ್ಮ ಮಾರಜನಕ ಕೃಷ್ಣಅಮರ
ತರುವ ಕಿತ್ತಿ ನಿಮ್ಮ ಮನೆಯೊಳ ಹಚ್ಚಿದನಂತೆ ||

ಸುಂದರಿ ಸೌಭಾಗ್ಯವಂತೆ ಮಂದಿರದೋಳಿಪ್ಪನನ್ನು
ಇಂದಿರೇಶನನ್ನು ತೋರೆ ನಂದ ಬಾಲ ಮಹಿಳೆ ಅಂಬಾ ||
******