..
kruti: tandevaradagopala vittala (ಪ್ರಹ್ಲಾದಗೌಡರು)
ವಂದಿಪೆ ನಿನಗೆ ಗಣನಾಥ ಮೊದಲೊಂದಿಪೆ ನಿನಗೆ ಗಣನಾಥ ಪ
ಬಂದ ವಿಘ್ನ ಕಳೆ ಗಣನಾಥ ಅ.ಪ.
ಸಿಂಧುರವದನರವಿಂದ ನಯನ ಘನ ಸುಂದರ ಸತಿಯರ ಮಂದಿರ ನಿಲಯನೆ 1
ಹೂಡಿದ ಆಟಕೆ ಮಾಡಿದ ಯೋಚನೆ ಕಡೆಗಾಣಿಸು ಘಟ್ಟಿಕಾಣಿಕೆ ಕೊಡುವೆ 2
ಮಂಗಳಾಂಗ ಮಹಮಾದಗಮನಿಯಳ ತಂದು ತೋರೋ ತಂದೆವರದಗೋಪಾಲವಿಠ್ಠಲಪ್ರಿಯ 3
***