Showing posts with label ನಿನ್ನವಳೆನಿಸೊ ಎನ್ನ ಘನ್ನ ಗೋಪಾಲ gopalakrishna vittala. Show all posts
Showing posts with label ನಿನ್ನವಳೆನಿಸೊ ಎನ್ನ ಘನ್ನ ಗೋಪಾಲ gopalakrishna vittala. Show all posts

Monday, 2 August 2021

ನಿನ್ನವಳೆನಿಸೊ ಎನ್ನ ಘನ್ನ ಗೋಪಾಲ ankita gopalakrishna vittala

ನಿನ್ನವಳೆನಿಸೊ ಎನ್ನ ಘನ್ನ ಗೋಪಾಲ

ನಿನ್ನವಳೆನಿಸೊ ಎನ್ನ ಪ.

ಅನ್ಯರೊಬ್ಬರ ಕಾಣೆ ಮನ್ನಿಸುವರ ಜಗದಿ

ನಿನ್ನ ಹೊರತು ಇಲ್ಲ ಪನ್ನಗಾದ್ರಿವಾಸ ಅ.ಪ.

ಜನನ ಮರಣ ಕಷ್ಟ ಘನಭವ ಜಲಧಿಯೊಳ್

ಮುಣಗಿ ಮುಣಗಿ ದಡವನು ಕಾಣದಿರುವೆನೊ 1

ದುಷ್ಟ ವಿಷಯಗಳ ಅಟ್ಟಿ ದೂರದಿ ನಿನ್ನ

ಶ್ರೇಷ್ಠ ನಾಮಾಮೃತ ಕೊಟ್ಟು ಪುಷ್ಟಿಯನಿತ್ತು 2

ಭಕ್ತಿ e್ಞÁನವು ನಿನ್ನ ಭಕ್ತ ಸಂಗವು ವಿ-

ರಕ್ತಿ ಪಥವ ತೋರಿ ಮುಕ್ತಿಯ ಪಾಲಿಸಿ 3

ಶ್ರೀನಿಕೇತನ ನಿನ್ನ ಧ್ಯಾನವ ಮಾಳ್ಪಂಥ

ಗಾನಾನಂದವನಿತ್ತು ದೀನ ಬಂಧುವೆ ನಿತ್ಯ 4

ಮಧ್ವಮತದ ಸಾರ ಉದ್ಘೋಷಿಸುವಂತೆ

ಬುದ್ಧಿಪ್ರೇರಕನಾಗಿ ಶುದ್ಧ e್ಞÁನವನಿತ್ತು 5

ನಿನ್ನ ಪದುಮ ಪಾದವನು ನಂಬಿದ ಎನ್ನ

ನಿನ್ನ ದಾಸಳೆನಿಸಿ ಘನ್ನ ಮಾರ್ಗವ ತೋರಿ6

ಅಂತರಂಗದ ಧ್ಯಾನ ನಿಂತು ನೀ ನಡಿಸುತ

ಅಂತರಂಗದಿ ನಿನ್ನ ಶಾಂತರೂಪವ ತೋರಿ 7

ತಂದೆ ಮುದ್ದುಮೋಹನ ಗುರುಹೃದಯ

ಮಂದಿರ ನಿವಾಸ ಎಂದೆಂದಿಗಗಲದೆ 8

ಗೋಪಾಲಕೃಷ್ಣವಿಠ್ಠಲದೇವ ಸರ್ವೇಶಆಪನ್ನಿವಾರಕ ಆಪದ್ಭಾಂದವನಾಗಿ9

****