Showing posts with label ಕರೆತಾರೆ ಕರೆತಾರೆ ಶ್ರೀನಿವಾಸನ ಸುರರರಸ ಸ್ವಾಮಿ prasannavenkata. Show all posts
Showing posts with label ಕರೆತಾರೆ ಕರೆತಾರೆ ಶ್ರೀನಿವಾಸನ ಸುರರರಸ ಸ್ವಾಮಿ prasannavenkata. Show all posts

Wednesday, 1 September 2021

ಕರೆತಾರೆ ಕರೆತಾರೆ ಶ್ರೀನಿವಾಸನ ಸುರರರಸ ಸ್ವಾಮಿ ankita prasannavenkata

 ರಾಗ -  :  ತಾಳ -


ಕರೆತಾರೆ ಕರೆತಾರೆ ಶ್ರೀನಿವಾಸನ

ಸುರರರಸ ಸ್ವಾಮಿ ಶ್ರೀ ವೆಂಕಟೇಶನ ll ಪ ll


ಬರಹೇಳೆ ಬರಹೇಳೆ ಬೇಗ ಕರಿಗಮನೆ ರಂಗಗೆ

ಸಿರಿರಾಣಿರಮಣ ಘನಾಂಗಗೆ

ಅರಘಳಿಗೆ ಸರಸವಿಲ್ಲ ಅರಸನಿಲ್ಲದವಳೆ ಸಲ್ಲ

ಸ್ಮರನೆಂಬೊ ಸಿರಿಕಳ್ಳ ಕರುಣ್ಯಿಲ್ಲ ll 1 ll


ಸುಂದರ ಸುಂದರ ಶುಭಮಂದಿರನ್ನ ದಯಾರಸ

ಸುಂದರನ್ನ ವರಕಂಬುಕಂದರನ್ನ

ಚೆಂದಾವರೆಗಣ್ಣವನ ಸಿಂಧೂರ ವರದನ್ನ ದೇ

ವೇಂದ್ರಜಿತ ಪಾರಿಜಾತ ತಂದನ್ನ ll 2 ll


ಹೋಯಿತೆ ಹೋಯಿತೆ ಹೊನ್ನಪ್ರಾಯ ಯದುರಾಯ ಬಾರ

ದಾಯಿತೀ ಅವಸ್ಥೆ ಹುಟ್ಟು ಹೊಂದಿ

ಕಾಯಬೇಕೆಂದೊಮ್ಮಿಗೆ ಉದಾಯವಾದ ಪ್ರಸನ್ವೆಂಕಟ

ರಾಯ ಬಂದ ಫಲಿಸಿತಾನಂದ ll 3 ll

***