ರಚನೆ : ಶ್ರೀ Khakandaki Krishnadasaru
ಅಕ್ಕ ಕೇಳೆ ನಿನ್ನ ತಪಸಿಯರೊಳಗೊಬ್ಬ ಮುಕ್ಕಣ್ಣಗೀವರಂತೆ |
ಮುಕ್ಕಣ್ಣಗೀವರಂತೆ || ಪ ||
ಮೂರ್ಖನೊ ಗಿರಿರಾಜ ವಿಗಡ ಮುನಿ |
ಮಾತನೆ ಲೆಕ್ಕಿಸಿ ಮದುವೆ ಮಾಡಿ ಕೊಡುವನಂತೆ || ಅ. ಪ. ||
ತಲೆ ಎಲ್ಲ ಜಡೆಯಂತೆ | ಅದರೊಳಗೆ ಜಲವಂತೆ |
ತಿಲಕ ಫಣೆಗೆ ಬಾಲಚಂದ್ರನಂತೆ |
ಹೊಳೆವ ಕಿಡಿಗಣ್ಣಂತೆ | ನಂಜು ಗೊರಳನಂತೆ |
ಸಲೆ ರುಂಡ ಮಾಲೆಯ ಕೊರಳಿಗ್ಹಾಕಿಹನಂತೆ || 1 ||
ಉರಗ ಭೂಷಣನಂತೆ | ಭಸ್ಮ ಲೇಪನನಂತೆ |
ಕರಿಯ ಚರ್ಮಾಂಬರ ಉಡುಗೆಯಂತೆ |
ತಿರಿದು ಉಂಬುವನಂತೆ | ಬಿಳಿಯ ಮೈಯವನಂತೆ |
ನಿರುತ ಡಮರುವ ಬಾರಿಸುವ ಜೋಗಿಯಂತೆ || 2 ||
ಹಡೆದವಳಿಲ್ಲವಂತೆ | ಎತ್ತನೇರುವನಂತೆ |
ಅಡವಿ ಗಿರಿಗಳಲಿ ಇಪ್ಪನಂತೆ |
ಒಡನೆ ಪುಲಿದೊಗಲ ಹಾಸಿಗೆ ಇಹುದಂತೆ |
ನುಡಿಗೊಮ್ಮೆ ರಾಮನೆಂಬೋ ಸ್ಮರಣೆಯಂತೆ || 3 ||
ಮಾರನ ರಿಪುವಂತೆ ಐದು ಮೋರೆಗಳಂತೆ |
ಆರೂ ಇಲ್ಲದ ಪರದೇಶಿಯಂತೆ|
ಧಾರುಣಿಯೊಳು ಗುರು ಮಹಿಪತಿಸುತಪ್ರಭೋ |
ಭವ ತಾರಕ ಶಿವನೆಂದು ಮೊರೆ ಹೋಗಬೇಕಂತೆ || 4 ||
***
Author: Khakandaki Krishnadasaru
akka kELe ninna tapasiyaroLagobba
mukkaNNageevarante |
mukkaNNageevarante || pa ||
moorkhano giriraaja vigaDa muni |
maatane lekkisi maduve maaDi koDuvanante || a.pa. ||
tale ella jaDeyante adaroLage jalavante |
tilaka phaNege baalachandranaMte |
hoLeva kiDigaNNante | nanju goraLanante |
sale runDa maaleya koraLig~haakihanante || 1 ||
uraga bhooShaNanante | bhasma lEpananante |
kariya charmaanbara uDugeyante |
tiridu unbuvanante | biLiya maiyavanante |
niruta Damaruva baarisuva jOgiyante || 2 ||
haDedavaLillavante | ettanEruvanante |
aDavi girigaLali ippanante |
oDane pulidogala haasige ihudante |
nuDigomme raamanembO smaraNeyante || 3 ||
maarana ripuvante aidu mOregaLante |
aaroo illada paradEshiyante|
dhaaruNiyoLu guru mahipatisutaprabhO |
bhava taaraka shivanendu more hOgabEkante ||4 ||
***