Showing posts with label ನಾ ನಿನಗೇನು ಬೇಡುವುದಿಲ್ಲ ಎನ್ನ ಹೃದಯ purandara vittala. Show all posts
Showing posts with label ನಾ ನಿನಗೇನು ಬೇಡುವುದಿಲ್ಲ ಎನ್ನ ಹೃದಯ purandara vittala. Show all posts

Monday, 12 April 2021

ನಾ ನಿನಗೇನು ಬೇಡುವುದಿಲ್ಲ ಎನ್ನ ಹೃದಯ purandara vittala

ಶ್ರೀಪುರಂದರದಾಸರು. check rangavittla also. already audio is there


ನಾ ನಿನಗೇನು ಬೇಡುವುದಿಲ್ಲ 

ಎನ್ನ ಹೃದಯ ಕಮಲದೊಳು ನೆಲೆಸಿರು ಹರಿಯೆ ll ಪ ll


ಶಿರ ನಿನ್ನ ಚರಣಕ್ಕೆರಗಲಿ ಚಕ್ಷು

ಎರಕದಿಂದಲಿ ನಿನ್ನ ನೋಡಲಿ ಹರಿಯೆ l

ನಿರುಮಾಲ್ಯ ನಾಸ ಘ್ರಾಣಿಸಲಿ ಎನ್ನ

ಕರಣ ಗೀತಂಗಳ ಕೇಳಲಿ ಹರಿಯೆ ll 1 ll


ನಾಲಿಗೆ ನಿನ್ನ ಕೊಂಡಾಡಲಿ ಎನ್ನ

ತೋಳು ಕರಂಗಳ ಮುಗಿಯಲಿ ಹರಿಯೆ l

ಕಾಲು ತೀರ್ಥ ಯಾತ್ರೆಗೆ ಪೋಗಲಿ, ಮನ

ಓಲೈಸಿ ನಿನ್ನನು ಸ್ಮರಿಸಲಿ ಹರಿಯೆ ll 2 ll


ಚಿತ್ತ ನಿನ್ನೊಳು ಮುಳುಗಾಡಲಿ ನಿನ್ನ

ಭಕ್ತ ಜನರ ಸಂಗ ದೊರಕಲಿ ಹರಿಯೆ

ತತ್ತ್ವಯೋಗಾಭ್ಯಾಸಕ್ಕಾಗಲಿ ಉಕ್ತಿ

ಸತ್ಯಮೂರುತಿ ನಮ್ಮ ಪುರಂದರವಿಟ್ಠಲ ll 3 ll

***