ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನವಗುಣ ಜರಿದು ಎನ್ನ ಮನವೇ | ನಿನ್ನವಗುಣ ಜರಿದೆನ್ನ ಮನವೇ | ಶಿರಿ | ಪನ್ನಗಾದ್ರೀಶನಾ ಕೂಡೋ ಸುಖ ಸೂರ್ಯಾಡೋ ಪ
ಕೆಲವು ಪುಣ್ಯವನೇ ಮಾಡಿ | ನರದೇಹದಲ್ಲಿ | ಇಳಿಯೊಳಾಗ್ರದಲಿ ಮೂಡಿ | ಹಲವು ಹಂಬಲಿಂದ ಗೆಳೆಯರೈವರ ಛಂದಾ | ಬೆಳೆಸಿ ಸದ್ಗುಣ ಬಿಡುವರೇ ಅಂಧರಾಗುವರೇ 1
ಮರಹು ಮನೆಯನೆ ಸೇರಿ | ಮಂದತನದೀ | ಅರಿವ ಪಂಥದಲಿ ಜಾರಿ | ಅನುದಿನ | ಕೊರವನಾ ಕೋಡಗದಂತೆ ಕುಣಿದುಚಿತೆ 2
ಒಂದೇ ನಿಷ್ಟೆಯಾ ವಿಡಿದು | ಸದ್ಭಾವದಿಂದಾ | ದುಂದುಗಾವೃತ್ತಿ ಕಳೆದು | ತಂದೆ ಮಹಿಪತಿದಯಾ ನಂದ ಪಡೆದು | ನಿನ್ನಾ ಬಂದ ಸಾರ್ಥಕದಿ ಬಾಳು ಮುನ್ನಿನ ಕೇಳು 3
****