Showing posts with label ಹರಿಎಂಬ ನಾಮ ಎರಡಕ್ಷರವ ದುರಿತ ಕಾನನ ಛೇದ vijaya vittala. Show all posts
Showing posts with label ಹರಿಎಂಬ ನಾಮ ಎರಡಕ್ಷರವ ದುರಿತ ಕಾನನ ಛೇದ vijaya vittala. Show all posts

Thursday, 17 October 2019

ಹರಿಎಂಬ ನಾಮ ಎರಡಕ್ಷರವ ದುರಿತ ಕಾನನ ಛೇದ ankita vijaya vittala

ವಿಜಯದಾಸ
ಹರಿ ಎಂಬ ನಾಮ ಎರಡಕ್ಷರವ
ದುರಿತ ಕಾನನ ಛೇದ ಪ

ವೇದರಾಶೀ ಎಂಬ ಭೂಸುರನು ಯಮಪುರದ
ಹಾದಿಯಲಿ ಪೋಗುತಿರೆ ಎಡಬಲದಲಿ
ಬಾಧೆ ಬಡುವ ಪಾಪಿ ಜೀವರಾಶಿಯ ನೋಡಿ
ಮಾಧವಾ ಹರಿ ಎನಲು ಮುಕ್ತರಾದರು ಎಲ್ಲಾ 1

ಮತ್ತೆ ಪುಷ್ಕರನೆಂಬ ಹರಿಭಕ್ತ ಬರಲಾಗಿ
ಮೃತ್ಯು ನಡುಗೀ ನಿಂದು ಪೂಜೆ ಮಾಡೀ
ಉತ್ತಮಗೆ ಅಲ್ಲಿದ್ದ ನರಕಗಳು ತೋರಿಸೆ
ಬತ್ತಿ ಪೋದವು ಹರಿ ಎಂಬ ಶಬ್ದವ ಕೇಳಿ 2

ಕೀರ್ತಿ ಮಾನವನೆಂಬೊ ಭೂಪಾಲ ಯಮಪುರದ
ಆರ್ತಿಯನು ಕಳೆದ ಶ್ರೀಹರಿಯ ವೊಲಿಸೀ
ಅಂತಕ ಬಂದು ಕಾದೆ ಸ
ಮರ್ಥನಾಗದೆ ಪೋದ ಏನೆಂಬೆ ಜಗದೊಳಗೆ3

ಹದಿನಾರು ಸಾವಿರ ತರುಣಿಯರು ಅಸುರನ್ನ
ಸದನದಲಿ ಸೆರೆಬಿದ್ದು ಹರಿಯ ತುತಿಸೇ
ಮುದದಿಂದ ಹರಿಪೋಗಿ ಖಳನ ಕೊಂದು ಆ
ಸುದತಿಯರಿಗೆ ತನ್ನ ಅಂಗಸಂಗವನಿತ್ತ4

ಕಂಡವರ ಮನೆ ಉಂಡು ಚಾಂಡಾಲರ ಕೂಡ
ಮಂಡಲದೊಳಗೆ ಪಾತಕನಾದರೂ
ಗಂಡುಗಲಿ ವಿಜಯವಿಠ್ಠಲ ಹರೆ ಹರೇ ಎಂದುಕೊಂಡಾಡಿದರೆ ಮುಕುತಿ ಸುರರಿಗಿಂತಲೂ ವೇಗ5
*********