..
kruti by ವೀರನಾರಾಯಣ Veeranarayana
ಧನ್ಯಧನ್ಯನೊ ಶ್ರೀ ಗುರುರಾಯಾಧನ್ಯ ಶ್ರೀ ರಾಘವೇಂದ್ರ ಯತಿವರ್ಯಾ ಪ
ವೀಣಾಪಾಣಿಯ ಆಣತಿಯಂತೆಮಾಣದೆ ಸನ್ಯಾಸವ ಗ್ರಹಿಸಿದೆವೇಣುಗೋಪಾಲನು ತಪದ ಕಾಣಿಕೆಗೆಕಾಣಿಸಿಕೊಂಡನೆ ಓ ಮಾರಾಯಾ 1
ಆ ಸುಧೆಯ ಹೊತ್ತಿಗೆಯ ಪರಿಮಳದವಾಸನೆಗೆ ಬೆರಗಾದ ಸುಧೀಂದ್ರರಭಾಸುರ ಕರ ಕಮಲಾಸಂಜಾತನೆಏಸು ಜನ್ಮದ ಸುಕೃತವೊ ಜೀಯಾ 2
ಉನ್ನತ ಗದುಗಿನ ವೀರನಾರಾಯಣಸನ್ನಿಧಿಯೊಳು ನರಸಿಂಹನೆದುರಿನಲಿಸನ್ನಿಹಿತನು ನೀನಾಗಿ ಕುಳಿತೆಯೋಆದರಿಸಿನ್ನು ಸಲಿಸಲು ನಿನ್ನ ಭಕ್ತಿಯಾ 3
***