ಕೋಲು ಕೋಲೆನ್ನಿ ಕೋಲೆ ಕೋಲೆ ಕೋಲೆನ್ನಿ ಮುತ್ತಿನ
ಕೋಲನ್ಹೊಯ್ದು ಪಾಡಿರಮ್ಮ ಜಾಣ ರಂಗಗೆ 1
ನೀರೊಳಾಡಿ ನಿಗಮ ತಂದ ಶೂರನ್ಯಾರೆ ರುಕ್ಮಿಣಿ
ಮೀನರೂಪ ಧರಿಸಿದ್ವಾರಿಜಾಕ್ಷ ಭಾಮಿನಿ 2
ಸಿಂಧುಮಥನಕಾಲಕೆ ಮಂದರ ಪೊತ್ತವನ್ಯಾರೆ ರುಕ್ಮಿಣಿ
ತಂದು ಸುಧೆಯ ಸುರರಿಗೆರೆದ ಕೂರ್ಮ(ಅ)ವ ಭಾಮಿನಿ 3
ಆದಿದೈತ್ಯನಂಗ ಸೀಳಿದವನು ದಾರೆ ರುಕ್ಮಿಣಿ
ಕಾದು ಭೂಮಿ ಸಾಧಿಸಿ ತಂದ ವರಾಹ ಭಾಮಿನಿ 4
ತಂದೆ ಕೊಂದು ಕಂದನ ಸಲಹಿದವನದಾರೆ ರುಕ್ಮಿಣಿ
ಕಂದರಾಕ್ಹಾಕಿದ ಕರುಳ ನಾರಸಿಂಹ ಭಾಮಿನಿ 5
ಇಳೆಯ ದಾನ ಬೇಡಿದಂಥ ತರಳನ್ಯಾರೆ ರುಕ್ಮಿಣಿ
ಅಳೆದÀು ಭೂಮಿ ತುಳಿದ ಬಲಿಯ ವಾಮನ ಭಾಮಿನಿ 6
ಕ್ಷತ್ರ್ರೇರ್ಹತವ ಮಾಡಿದ ಸಮರ್ಥನ್ಯಾರೆ ರುಕ್ಮಿಣಿ
ಹೆತ್ತ ತಾಯಿ ಕಡಿದ ಶೂರ ಭಾರ್ಗವ ಭಾಮಿನಿ 7
ಸೇತುಗಟ್ಟಿ ಸೀತೆಯ ತಂದಾತನ್ಯಾರೆ ರುಕ್ಮಿಣಿ
ವಾತಸುತನಿಗೊಲಿದ ಶ್ರೀರಘುನಾಥ ಭಾಮಿನಿ 8
ಕÀಳ್ಳತನದಿ ಕಡೆದ ಬೆಣ್ಣೆ ಕದ್ದವನ್ಯಾರೆ ರುಕ್ಮಿಣಿ
ಗೊಲ್ಲರೊಡೆಯ ಗೋವ್ಗÀಳ ಕಾಯ್ದ ಕೃಷ್ಣ ಭಾಮಿನಿ 9
ವಸನ ಬಿಟ್ಟು ನಾಚಿಕಿಲ್ಲದ ಪುರುಷನ್ಯಾರೆ ರುಕ್ಮಿಣಿ
ಅಸುರರ್ವೈರಿ ಆದಿಪುರುಷ ಬೌದ್ಧ ಭಾಮಿನಿ 10
ಕುದುರೆನೇರಿ ಎದುರು ಬರುವ ಚೆದುರನ್ಯಾರೆ ರುಕ್ಮಿಣಿ
ಮದನಮೂರುತಿ ಮುದ್ದು ಭೀಮೇಶಕೃಷ್ಣ ಭಾಮಿನಿ11
****