Showing posts with label ಒಲಿದೆ ಯಾತಕಮ್ಮಾ ಲಕುಮಿ ವಾಸುದೇವಗೆ ankita gurugopala vittala OLIDEYAATAKAMMA LAKUMI VAASUDEVAGE. Show all posts
Showing posts with label ಒಲಿದೆ ಯಾತಕಮ್ಮಾ ಲಕುಮಿ ವಾಸುದೇವಗೆ ankita gurugopala vittala OLIDEYAATAKAMMA LAKUMI VAASUDEVAGE. Show all posts

Friday 31 December 2021

ಒಲಿದೆ ಯಾತಕಮ್ಮಾ ಲಕುಮಿ ವಾಸುದೇವಗೆ ankita gurugopala vittala OLIDEYAATAKAMMA LAKUMI VAASUDEVAGE




CHAITRA SURESH RAO  2021





ರಾಗ 


ಒಲಿದೆ ಯಾತಕಮ್ಮಾ ಲಕುಮಿ ವಾಸುದೇವಗೆ?
ಹಲವಂಗದವನ ಹವಣೆ ತಿಳಿದೂ ತಿಳಿದೂ ತಿಳಿಯದ ಹಾಗೆ! ||

ಕಮಲಗಂಧಿ ಕೋಮಲಾಂಗಿ ಸುಂದರಾಬ್ಜವದನೆ ನೀನು
ರಮಣ ಮತ್ಸ್ಯ ಕಠಿಣಕಾಯ ಸೂಕರಾಸ್ಯನು
ರಮಣೀಯ ಸ್ವರೂಪಿ ನೀನು ಅಮಿತಘೋರ ರೂಪನವನು
ನಮಿಪರಿಷ್ಟದಾನಿ ನೀನು ದಾನವ ಬೇಡುವವನಿಗೆ ||

ಲಲಿತೆ ಚಾರುಶೀಲೆ ನೀನು ಕಲ್ಕಿ ಕಲಹಪ್ರಿಯನವನು
ಕುಲದ ಕುರುಹು ಇಲ್ಲ ಗುಣದ ನೆಲೆಯು ಕಂಡಿಲ್ಲ
ಹಲವು ಕಾಲದವನು ಅವನ ಬಂಧು ಬಳಗ ನಿಷ್ಕಿಂಚನರು
ಜಲಧಿ ಆಲದೆಲೆಯ ಮೇಲೆ ಮಲಗಿ ಬೆರಳ ಚೀಪುವವನಿಗೆ ||

ಸ್ವರತಾನಪೇಕ್ಷಾಕಾಮಿ ನಿದ್ರಾಹೀನ ಅನಶನಿಯು
ಪರುಷರೂಪ ವಾಚ್ಯ ಶಬ್ದ ಅಮಿತ ಭೋಕ್ತನು
ಗುರುಗೋಪಾಲ ವಿಠ್ಠಲನು ನಿರುತ ತನ್ನ ವಕ್ಷದೊಳು
ಅರಮನೆಯ ಮಾಡಿಕೊಂಡು ಮರುಳು ಮಾಡಿದ ಮಾಯಾವಿಗೆ ||
***

Olide yaatakammaa lakumi vaasudevage || pa ||

Halavangadavana havane tilidu tilidu tiliyada haage || a.pa ||

Kamalagandhi komalaangi sundaraabjavadane neenu |
Ramana matsya kathina kaaya sookaraasyanu ||
Ramaneeya swaroopi neenu amita gora roopanavanu |
Namiparishtadaani neenu daanava beduvavanige || 1 ||

Lalita chaaru sheele neenu kalki kalaha preeyanavanu |
Kulada kuruhu illaa gunada neleya kandillaa |
Halavu kaaladavanu avana balaga bandhu nishkinchananu|
Jaladhi aaladeleya mele malagi berala cheepuvavanige || 2 ||

Swarataana pekshakaami nidraaheena anashaniyu |
Sparsharoopa vaachya shabda amita bhoktanu ||
Guru gopaalaviththalanu niruta tanna vakshadolu |
Aramaneya maadi kottu maralu maadida maayaavige || 3||
***

pallavi

olide yAtakammA lakumI vAsudEvagE

anupallavi

halavandadavana avanE tiLidu tiLidu tiLidu tiLiyAdhAnga

caraNam 1

kamala ganDhi kOmalAngi sundarsyA vadanE nInu ramaNa matsya kaThiNa kAya sUkarAsyanU
ramaNIya svarUpi nInu amita ghOra rUpanavanu namipariSTa dAyi nInu dAnava bEDuvanigE nI

caraNam 2

jANe ratnAkarana magaLu tAnu shuddha bhrugu janavanu AnandAbja sadane nInu vanavAsI avanU
mAnya pativrateyu nInu nAnA yOsiSTAni avanu jnAna citra vasanE nInu hIna caila nAdavanigE

caraNam 3

avana vArte kELidavaru ollarO samsAravannu avana mUrti nODi maneya hanava biDuvarO
avanapurake pOva janaru ommiganda tirugi bararO avanu tAnE tanayarannu tannavayava dinda paDedavanige

caraNam 4

svayata anapEkSa kAmiyavanu nidrA hIna anAshana paruSarUpa vAkya shabda amita bhOktanu
guru gOpAla viTThalanu niruta tanna vakSasthaLadoLu aramaNeya mADittu ninagE maralu mADida mAyA dEvI
***


🌷🌹ಮಹಾಲಕುಮಿ ಮಹಿಮೆ🌹🌷
ಚಿಂತನ...✍......by  ಶ್ರೀಸುಗುಣವಿಠಲ..

ನಿತ್ಯ ಮುಕ್ತಳೂ ನಿರ್ವಿಕಾರಳೂ  ನಿತ್ಯ ಸುಖಸಂಪೂರ್ಣಳೂ ಸರ್ವ ಜಗಧಾಧಾರೆಯೂ..ಮುಕ್ತಾ ಮುಕ್ತ ಗುಣ ಸಂಪೂರ್ಣಳೂ ಶ್ರೀಹರಿಯ ವಕ್ಷಸ್ಥಳ ವಾಸಿಯೂ ..ಭಕುತರ ಪೊರೆಯೂವ ಭ್ರತ್ಯವತ್ಸಲೆಯೂ ...ಆದ ಶ್ರೀ ಮಹಲಕ್ಷ್ಮಿಯು  .ಭಗವಂತನ ನಂತರದ ಅಧ್ಭತವಾದ ಸ್ಥಾನವನ್ನು ಪಡೆದಿದ್ದಾಳೆ.!!.
ಅನಂತ ಬ್ರಹ್ಮ ರುದ್ರಾದೇರ್ನಾಸ್ಯಾಃ ಶಕ್ತಿ ಕಲಾಪಿ ಹಿ|ತೇಷಾಂ ದುರತ್ಯಯಾಪ್ಯೇಷಾ|...ಗೀತಾ ತಾತ್ಪರ್ಯ ನಿರ್ಣಯ.
ಅನಂತ ಬ್ರಹ್ಮಾದಿಗಳ ಒಟ್ಟು ಶಕ್ತಿಯುಲಕ್ಷ್ಮೀ ಶಕ್ತಿಯ ಒಂದಂಶಕ್ಕೂ ಸಮನಾಗುವುದಿಲ್ಲಾ.!.ಯಾವ ವಿಷಯದಲ್ಲಿಯೂ ಅವರು ದೇವಿಯನ್ನು ಅತಿಕ್ರಮಿಸಲಾರರು.ಬ್ರಹ್ಮಾದಿಗಳಿಂದ ಅವಳು ಸರ್ವದಾ ಪೂಜ್ಯಳು.ಸೇವಿತಳೂ ಆಗಿದ್ದಾಳೆ.!.
ಯಂ ಕಾಮಯೇ ತಂ ಉಗ್ರಂ ಕೃಣೋಮಿ ತಂ ಬ್ರಹ್ಮಾಣಂ ತಂ ಋಷೀಂ ತಂ ಸುಮೇಧಾಂ|.....ಅಂಭ್ರಣೀ ಸೂಕ್ತ......ದ ವಾಕ್ಯದಂತೆ ನಾನು ಇಚ್ಛಿಸುವವರನ್ನು  ರುದ್ರ, ಬ್ರಹ್ಮ, ಋಷಿ, ಮೇಧಾವಿಗಳನ್ನಾಗಿ ಮಾಡಬಲ್ಲೆ ...ಎಂದು ಲಕ್ಷ್ಮೀ ತನ್ನ ಸಾಮರ್ಥ್ಯವನ್ನು ಹೇಳುತ್ತಾಳೆ.ಅರ್ಥಾತ್...ಬ್ರಹ್ಮ ರುದ್ರಾದಿ ಆಗುವ ಮಹಾಯೋಗ್ಯತೆಯುಳ್ಳ ವಿಶೇಷ ಚೇತನರು ತಮ್ಮ ಸಾಧನೆ ಪೂರ್ತಿ ಆದಾಗ್ಯೂ ಆಯಾ ಪದವಿಯನ್ನು ಶ್ರೀದೇವಿಯ ಅನುಗ್ರಹದಿಂದಲೇ ಪಡೆಯುವರು!.ಅವಳ ಅನುಗ್ರಹವಿಲ್ಲದೇ ಆ ಪದವಿಗಳನ್ನು ಹೊಂದಲಾರರು.ಶ್ರೀಹರಿಯ ಕುಡಿ ಗಣ್ಣ ನೋಟದ ಅನುಗ್ರಹದಿಂದ..ಜಗತ್ ಸೃಷ್ಠ್ಯಾದಿಗಳನ್ನು ಮಾಡಬಲ್ಲಳು.ಲಕ್ಷ್ಮಿಯೇ ಸ್ವತಃ ಹೇಳುತ್ತಾಳೇ.....
ಇಂಥಹ ನನ್ನ ಮಹಾ ಶಕ್ತಿಗೆ  ಸಾಮರ್ಥ್ಯಕ್ಕೆ ಕಾರಣನಾದವನು ಸಾಗರಶಾಯಿಯಾದ ಶ್ರೀನಾರಾಯಣ.!ಅವನ ಕಿಂಚಿತ್ ಅನುಗ್ರಹವೇ ನನ್ನಿಂದ ಈ ಸಕಲ ಕ್ರಿಯೆಗಳನ್ನು ಮಾಡಿಸುತ್ತದೆ .
ಶ್ರೀಮುಕುಂದನ ಮಹಿಳೆ..ಲಕ್ಷ್ಮೀ..ಮಹಾಮಹಿಮೆ ಗೇನೇಂಬೆ.....ಹರಿಕಥಾಮೃತಸಾರ ೨೬-೧೨......
ಹೀಗೆ ಬ್ರಹ್ಮಾದಿ ಸಕಲ ಜಗತ್ತಿಗೆ  ಜನನಿಯೆನಿಸಿದ ಮಹಾಲಕ್ಷ್ಮೀ ಶ್ರೀಮನ್ನಾರಾಯಣನ ಪ್ರೀತಿಯ ಮಡದಿ.ಜ್ಞಾನ ಬಲ ಭಕ್ತ್ಯಾದಿ ಅನಂತ ಗುಣ ಪೂರ್ಣೆ ಆತನ ಅನುಗ್ರಹದಿಂದ ಶ್ರೀಹರಿಗಿಂತ  ಅನಂತಾನಂತ ಗುಣನ್ಯೂನ್ಯಳು. ಇಡೀ ಬ್ರಹ್ಮಾಂಡದಲ್ಲಿ ಮುಕ್ತಾಮುಕ್ತರಲ್ಲಿ..ದೇವಾನು ದೇವತೆಗಳಲ್ಲಿ...ಅವಳ ಸಮಾನನೆನಿಪರು ಯಾರೂ ಇಲ್ಲಾ.! ಎಲ್ಲರೂ ಅವಳ ಅಧೀನರೇ..ಅವಳು ಶ್ರೀಹರಿಯ ಅಧೀನಳೂ.!!.
ರಮಾಸಮುದ್ರನ ಕುಮಾರಿ ನಿನ್ನ ಸರಿಸಮಾನರಾರಮ್ಮಾ...ಉಮೇಶ ಮೊದಲಾದ ಅಮರನಿಕರವು ಭ್ರಮಿಸಿ ನಿನ್ನ ಪಾದಕಮಲ ತುತಿಪರಮ್ಮಾ......ಎಂದು ಶೇಷವಿಠಲ ದಾಸರು ನುಡಿದಿದ್ದಾರೇ...
ಬಾರೇ ಭಾಗ್ಯದ ನಿಧಿಯೇ ಕರವೀರನಿವಾಸಿನಿ ವಾಸಿನಿ ಸಿರಿಯೇ....ಎಂದು ಅನಂತಾದ್ರೀಶರೂ... 
ಪಾಲಿಸೇ ಪದುಮಾಲಯೇ...ನೀನೇ ಗತಿ ಪಾಲಿಸೇ ಪದುಮಾಲಯೇ....ಎಂದು ವಿಜಯದಾಸರೂ... ಹಾಗೂ ಸಾಕಷ್ಟು ದಾಸಾರ್ಯರೂ ಯತಿವರೇಣ್ಯರೂ...ಹಾಡಿ ಪಾಡಿ ಪ್ರಾರ್ಥಿಸಿದ್ದಾರೆ...
ಸಕಲ ಸಜ್ಜನರಿಗೂ ಸಿದ್ದಿ, ವಿಧ್ಯೇ, ಬುದ್ಧಿ, ..ಐಹಿಕ /ಪಾರಮಾರ್ಥಿಕ ಅಷ್ಟೈಶ್ವರ್ಯಗಳನ್ನೂ ಕರುಣಿಸುವ ಕಮಲವದನೆ ಕಮಲ ನಯನೆ ಶ್ರೀಮಹಾಲಕುಮಿಯೇ ಆಗಿದ್ದಾಳೆ.
ವಿಷ್ಣುನಾ ಸಹಿತಾ ಧ್ಯಾತಾ ಸಾ ಹಿ ತುಷ್ಟಿಂ ಪರಾಂ ವೃಜೇತ್| 
ಲಕ್ಷ್ಮೀನಾರಾಯಣರು ನಿತ್ಯ ಅವಿಯೋಗಿಗಳು.ಅದುದರಿಂದ ಲಕ್ಷ್ಮೀಯನ್ನು ಯಾವಾಗಲೂ ನಾರಾಯಣನ ಸಹಿತವೇ ಪೂಜಿಸಿದರೇ .ಲಕ್ಷ್ಮೀ ಪರಮ ಸಂತುಷ್ಟಳಾಗುವಳು.
ಒಡೆಯನಿದ್ದಲ್ಲಿಗೆ ಮಡದಿಯು ಬರುವುದು..ರೂಢೀಗುಚಿತವಿದು ನಡೆ ನಮ್ಮ ಮನೆಗೆ.....ಬಾರೇ ಭಾಗ್ಯದ ನಿಧಿಯೇ.....ಎಂದಿದ್ದಾರೇ ದಾಸರು..
*ಭೃಗುವಾರ ಬರಲೀಬೇಕು ಭಾರ್ಗವಿದೇವಿ....ಎಂದು ...ಶುಕ್ರವಾರಾಭಿಮಾನಿಯಾದ ಶ್ರೀಲಕುಮಿಯನ್ನು ..
ಇಂದಿರೇಶಾಂಕಿತ ರು ಪ್ರಾರ್ಥಿಸಿದ್ದಾರೆ*.

ಅನಂತಾನಂತ  ರೂಪಾ  ಚ ಜ್ಞಾನಾನಂದಾದಿ ರೂಪಿಣೀ|
ಸಮಾಚ ಸರ್ವ ರೂಪೇಷುವಿಶಿಷ್ಟಾ ದಕ್ಷಿಣಾ ಸುಖೇ||
...ಸತ್ತತ್ವರತ್ನಮಾಲಾ...೨೧೦.
ಶ್ರೀಲಕುಮಿಯು ಅನಂತಾನಂತಜ್ಞಾನಾನಂದಾತ್ಮಕ ರೂಪಗಳನ್ನುಹೊಂದಿದ್ದೂ.. ವಿಶೇಷವಾದ ದಕ್ಷಿಣಾ ನಾಮಕ ರೃಪದಿಂದ ಸುಖಾದಿ ವಿಷಯಗಳಲ್ಲಿ ಅತಿ ಉತ್ಕೃಷ್ಟಳಾಗಿದ್ದಳೇ..

ಉತ್ತರೊತ್ತರ ಸಾ ತು ವಿಶಿಷ್ಟಾ ದಕ್ಷಿಣಾ ಸುಖೇ|.....ಭಾಗವತ ತಾತ್ಪರ್ಯ.
ಶ್ರೀಲಕುಮಿ ನಿತ್ಯಾವಿಯೋಗಿನಿಯಾಗಿ ಹಗಲು ರಾತ್ರಿ ಶ್ರೀಹರಿಯ ಬಳಿಯಲ್ಲಿಯೇ..ಇದ್ದು  ತಾನೇ ಸಾಧನ ಸಕಲವೂ ಆಗಿ ಸೇವಾದಿಗಳಲ್ಲಿ ತೊಡಗಿರುತ್ತಾಳೇ...
ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರರೂಪದಲ್ಲಿ ನಿಂತು ಚಿತ್ರ ಚರಿತನಾದ ಹರಿಯ ನಿತ್ಯ ಸೇವೇ ಮಾಡುತಿಹಳೂ....ಏನು ಧನ್ಯಳೋ ಲಕುಮಿ ಎಂಥಾ ಮಾನ್ಯಳೂ.....ಎಂದಿದ್ದಾರೇ ದಾಸರು..ನಾವು ಮಾಡುವ ಎಲ್ಲಾ ಪೂಜಾ ಸೇವಾದಿಗಳು ಶಂಖಸ್ಥಿತಳಾದ ಲಕ್ಷ್ಮೀಯ ಮೂಲಕವೇ ಎಂಬುದು ಗಮನಾರ್ಹ!!.
ಶ್ರೀ ಸಂತುಷ್ಟಾ ಹರೇಃ ತೋಷಂ ಜನಯೇಯೇತ್ ಕ್ಷಿಪ್ರಮೇವತು|
...ಗೀತಾ ತಾತ್ಪರ್ಯ -೧೨.
ಮರಳು ಮಾಡಿಕೊಂಡೆಯಲ್ಲೇ ಮಾಯಾದೇವಿಯೇ..ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಂತೇ.....ಎಂದೇ ಉಧ್ಗಾರತೆಗಿದ್ದಾರೆ ದಾಸರು.
ಹೀಗೆ ಮಹಾಲಕುಮಿಯ ಮಹಿಮೆಯನ್ನರಿತು ವಿಷ್ಣು ಸಹಿತವಾಗಿ ಶ್ರದ್ಧಾ ಭಕ್ತಿಗಳಿಂದ ಉಪಾಸಿಸಿದಲ್ಲಿ...ನಮಗೆ ಶ್ರೇಷ್ಠವಾದ ಮೋಕ್ಷ ಫಲ ಗಳನ್ನು ನೀಡುವುದರಲ್ಲಿ ಸಂದೇಹವೇ ಇಲ್ಲಾ...
ಎಂಬ ಯಥಾಮತಿ ವ್ಯಾಖ್ಯಾನ/ಚಿಂತನ ದೊಂದಿಗೆ ........
ಶ್ರೀಸುಗುಣವಿಠಲಾರ್ಪಣಮಸ್ತು.
🌻🌹🥦🌷🌸🥦🌸🌹🌷🌹
*****

ಹರೇ ಶ್ರೀನಿವಾಸ 
ಒಲಿದೆ ಯಾತಕಮ್ಮ ಲಕುಮಿ ವಾಸುದೇವಗೆ
ಈ ಕೃತಿಯಲ್ಲಿ ದಶಾವತಾರದ ವರ್ಣನೆ ನಿಂದಾ ರೂಪದಲ್ಲಿ ಮೇಲ್ನೋಟಕ್ಕೆ ಕಂಡರೂ ಸರ್ವರೀತಿಯಿಂದಲೂ ಅಸಮ ಮಹಿಮನ ಕೊಂಡಾಡಿದ್ದಾರೆ.. 

ಹಲವು ಅಂಗದವನ..
ಹಲವು ಅಂಗ ಮೇಲ್ನೋಟಕ್ಕೆ ವಿಲಕ್ಷಣ ಎನಿಸಿದರೂ ಅಸಹಜ ಎನಿಸಿದರೂ ಭಗವಂತನ ಕುರಿತಾಗಿ ಸಂಪೂರ್ಣ ಮನೋಹರ ದೋಷದೂರವಾಗಿದೆ.. 

ಅವನಿಗೂ ಅವನ ಅಂಗಗಳಿಗೂ ಅವತಾರಗಳಿಗೂ ಭೇದವಿಲ್ಲ.. ಸ್ವಗತಭೇದವಿವರ್ಜಿತನು.. ಮತ್ಸ್ಯ ಕೂರ್ಮ ವರಾಹ ನಾರಸಿಂಹ ವಾಮನ ಭೃಗುರಾಮ ದಾಶರಥಿ ಕೃಷ್ಣ ಬುದ್ಧ ಕಲ್ಕಿ ಸೇರಿದಂತೆ ಅನಂತ ಅವತಾರಗಳು ಒಂದಕ್ಕೊಂದು ಭೇದವಿಲ್ಲ.. 

ತಿಳಿದೂ ತಿಳಿದೂ ತಿಳಿಯದ ಹಾಗೆ. 
ಅವಳು ತಿಳಿದಷ್ಟು ತಾರತಮ್ಯೋಕ್ತ ಇತರರು ತಿಳಿದಿಲ್ಲ.. ನಿತ್ಯ ನೂತನ ರೂಪಗಳ ನೋಡುತ ಹಿಗ್ಗುವಳು ತಿಳಿದು ತಿಳಿದು.. ಆದರೂ ಗೊತ್ತಿದ್ದರೂ ಈ ತರಹದವನಿಗೆ ಏಕೆ ಒಲಿದೆ.. ಸಂಪೂರ್ಣವಾಗಿ ಅವನನ್ನು ತಿಳಿದಿಲ್ಲ.. ತಿಳಿದಿಲ್ಲ ಏನೋ ಎಂಬಂತೆ ತಿಳಿಯದೆ ಒಲಿದೆಯಾ.. ಅಂತಲೂ ಸಾಮಾನ್ಯವಾಗಿ ಹೇಳುವ ಹಾಗೆ. 
ಮೂಲರೂಪ ನಾರಾಯಣ ಮಾಯಾ ಲೋಲ ಅನಂತ ಅವತಾರ ನಾಮಕ..
ಮೋಕ್ಷಪ್ರದ ವಾಸುದೇವ ರೂಪ..
ದಶಾವತಾರದ ವರ್ಣನೆ ಮಾಡುತ್ತ ಲಕ್ಷ್ಮೀ ದೇವಿಯ ವರ್ಣನೆ ಜೊತೆ ಜೊತೆಗೆ ಮಾಡುತ್ತಿದ್ದಾರೆ. 

ಮೇಲ್ನೋಟಕ್ಕೆ ಮತ್ಸ್ಯ ನಾರುವ ರೂಪ ಎನಿಸಿ ಅವನಿಗೆ ಒಲಿದಾಕೆ ನೀನು ಕಮಲಗಂಧಿ 

ಕೂರ್ಮರೂಪದಿಂದ ಮಂದರ ಗಿರಿ ಎತ್ತಿದ ಬೆನ್ನಿನವನು ಕಠಿಣ ಕಾಯ.. ಭಾರ ಎತ್ತಿದ ಬೆನ್ನು ಅಷ್ಟು ಕಠಿಣ.. ಅವನ ಒಲಿದಾಕೆ ನೀನು ಕೋಮಲಕಾಯೆ.. ಕೋಮಲಾಂಗಿ.. 
ಸುಸೂಕರ ರೂಪದವನು ಕೋರೆದಾಡೆಯವನು.. ಆದರೆ ಅವನ ಒಲಿದಾಕೆ ನೀನು ಸುಂದರಾಬ್ಜವದನೆ.. 
ಅಮಿತ ಘೋರ ರೂಪದ ಉಗ್ರ ನರಸಿಂಹ ರೂಪದವನಿಗೊಲಿದ ನೀನು ರಮಣಿ ಸ್ವರೂಪಿ.. 
ದಾನವ ಬೇಡುತ ಬಂದ ವಾಮನನಿಗೊಲಿದ ನೀನು ಬೇಡಿದವರಿಗೆ ಇಷ್ಟಾರ್ಥ ಕೊಡುವವಳು.. 
ಶುದ್ಧ ಮುನಿಪುಂಗವ ಭೃಗುಮುನಿ ವಂಶಜ ಜಮದಗ್ನಿ.. 
ಮುನಿ ಪುತ್ರ ಮುನಿಕುಲ ದ ಆಶ್ರಮವಾಸಿ.... ಜಪ ತಪ ನಿರತ ವೈರಾಗ್ಯದ ವಂಶ ದ... ಪರಶುರಾಮ ದೇವರಿಗೊಲಿದ ನೀನು ರತ್ನಾಕರ ಎನಿಸಿದ ಸಮುದ್ರರಾಜ ನ ಮಗಳು..
ವನವಾಸಿ ಆದ ಜಟಾ ವಲ್ಕಲಧಾರಿ ಸಾಧಾರಣ ಜೀವನ ಶೈಲಿಯವನಿಗೆ ಕಷ್ಟ ನಷ್ಟದ ವನದಲ್ಲಿ ಬದುಕುವನನಿಗೆ ಒಲಿದವಳು ನೀನು ಆನಂದಾಬ್ಜಸದನೆ.. 
ಮಾನೆ ಪತಿವ್ರತೆ ನೀನು ಶ್ರೀ ಭೂ ರೂಪಿಯು..

ಷಣ್ಮಹಿಷಿಯರ ಕುಬ್ಜೆಯ ಅಗ್ನಿ ಪುತ್ರ ರು ವರದಿಂದ ಬಂದ 16 ಸಾವಿರ ಸ್ತ್ರೀ ಯರ ರಮಣ ಅವನು.. 
ಅಸುರ ಜನ ಮೋಹನಾರ್ಥದ ಬುದ್ಧರೂಪ ತ್ರಿಪುರಾಸುರರ ಪತ್ನಿಯರ ವ್ರತ ಭಂಗ ಮಾಡಿದ ಬೆತ್ತಲೆ ನಿಂತ ಬುದ್ಧನಿಗೆ ಒಲಿದ ನೀನು ವೇದಮಾನಿ ಜ್ಞಾನ ಚಿತ್ರ ವಸನೆ.. 
ಲಲಿತೆ ಚಾರುಶೀಲೆ ನೀನು.. ಅವನು ದುರುಳರ ವಧಿಸಲು ಕಲಹ ಮಾಡಲೆಂಬಂತೆ ಕಲ್ಕಿ ರೂಪದಿಂದ ಕುದುರೆ ಏರೀ ಬರುವವನು..
ಸ್ವತಂತ್ರ ಜನನ ಮರಣಾದಿ ದೋಷದೂರ ಯಾರೂ ತಂದೆ ತಾಯಿಗಳಿರದ ಕುಲವಿಲ್ಲದವನು ಜಗಪಿತ ನು ಜಗದೀಶನು.. 
ಒಂದು ನೆಲೆ ಇಲ್ಲ.. ಸರ್ವತ್ರ ವ್ಯಾಪ್ತನು..ಹಲವು ಕಾಲದವನು ಆದರೂ ವೃದ್ಧಿ ಹ್ರಾಸ ಗಳು ಇಲ್ಲದವನು.
.. ಬಾಲಕನ ರೂಪದಲ್ಲಿ ಬೆರಳು ಚೀಪುತ ಮಲಗುವವನು.. ಅವನ ನಂಬಿದರೆ ನಶ್ವರ ಅಶುದ್ಧ ಸುಖದ ಸಂಸಾರವಿಲ್ಲ.. ನಿತ್ಯ ಸುಖದ ವೈರಾಗ್ಯ ಬಯಸುವರು.. ಉತ್ತಮ ತ್ರಿಧಾಮ ಬಯಸುವ ಸಾಧಕರು ಮರ್ತ್ಯ ಲೋಕ ಬರುವ ಹಾಗಿಲ್ಲ.. ಲೆಕ್ಕಿಸದೆ ಲಕುಮಿಯ ಬೊಮ್ಮನ ಪೊಕ್ಕಳಿಂದಲೀ ಪಡೆದ ಪೊಸಪೊಂಬಕ್ಕಿದೇರನ ಪಡೆದವಯವಗಳಿಂದ ದಿವಿಜರನು ಎಂಬಂತೆ ಸ್ವರಮಣ.. ಅನಪೇಕ್ಷೆ ಯವ.. ಸೃಷ್ಟ್ಯಾದಿ ಅಷ್ಟಕರ್ತ ತನಗೆ ಏನೂ ಲಾಭವಿಲ್ಲ.. ಅಜರಾಮರಣ.. ಹೀಗೆ ಅನಂತಾನಂತ ಅನಂತಾನಂತ ಮಹಿಮೆಗಳು ಉಳ್ಳ ಅವನಿಗೆ ನೀನು ವಕ್ಷ ಸ್ಥಳ ನಿವಾಸಿ.. 
ಇಂಥ ಲಕ್ಷ್ಮೀ ನಾರಾಯಣರ ಅನುಗ್ರಹ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಅನುಗ್ರಹ ಸಕಲ ದೇವತೆಗಳು ಸಕಲ ಗುರುಗಳ ಅನುಗ್ರಹ ಸದಾ ಇರಲಿ ಎಂದು ಪ್ರಾರ್ಥಿಸುತ್ತ.. ಯಥಾಮತಿ ಪ್ರಯತ್ನ 
-(received in WhatsApp)
*****