ಬಂದ ಶ್ರೀಕೃಷ್ಣ ನಲಿಯುತ್ತ ನಸುನಗೆ-ಯಿಂದ ಬೇಗ ಯಶೋದೆಯಿದ್ದೆ[ಡೆಗೆ] ಪ.
ಉದಯದೊಳೆದ್ದು ಮೊಸರ ಕಡೆವಾಗ ತನ್ನಅದುಭುತ ಬಾಲಲೀಲೆಗಳ ಪಾಡೆಮುದದಿ ನಯನದಿ ಜಲ ತುಳುಕಾಡುತಿರೆ ಕಂಡುಮದನನಯ್ಯನು ನಚ್ಚಿ ಬೆಣ್ಣೆಯ ಬೇಡುತ್ತ1
ಮಕ್ಕಳುಗಳ ಕೂಡಿ ಮನೆಮನೆಯೊಳಗಾಡಿಮಿಕ್ಕುಮೀರಿದ ರಕ್ಕಸರನೀಡ್ಯಾಡಿಅಕ್ಕರಿಂದಲಿ ತಾಯ ಮುಖವನೀಕ್ಷಿಸುತಲಿಗಕ್ಕನೆ ಸೆರಗ ಪಿಡಿದು ಮೊಲೆಯ ಕೊಡೆನ್ನುತ2
ಕುರುಳಕೂದಲು ಅರಳೆಲೆ ಮಾಗಾಯಿಕೊರಳಪದಕ ಹಾರ ಎಸೆಯುತಿರೆಚರಣದಂದುಗೆ ಗೆಜ್ಜೆ ಘಲುಘಲುಕೆನ್ನುತಲಿಸಿರಿಯರಸ ಹಯವದನನೆನಿಪ ಮೋಹನಾಂಗ 3
***