Showing posts with label ಆರು ಕಾಯುವರಯ್ಯ ನೀ ದೂರ ನೋಡಿದರೆ gopala vittala AARU KAAYUVARAYYA NEE DOORA NODIDARE. Show all posts
Showing posts with label ಆರು ಕಾಯುವರಯ್ಯ ನೀ ದೂರ ನೋಡಿದರೆ gopala vittala AARU KAAYUVARAYYA NEE DOORA NODIDARE. Show all posts

Thursday, 9 December 2021

ಆರು ಕಾಯುವರಯ್ಯ ನೀ ದೂರ ನೋಡಿದರೆ ankita gopala vittala AARU KAAYUVARAYYA NEE DOORA NODIDARE

 ರಾಗ : ವಲಚಿ   ತಿಶ್ರನಡೆ


Audio by Vidwan Sumukh Moudgalya


 ಶ್ರೀಗೋಪಾಲದಾಸರ ಕೃತಿ 


 ಪ್ರಾರ್ಥನಾ ಭಾಗ - ಕಲಿಬಾಧ ದೂರಮಾಡುವ ವಿಷಯ


ಆರು ಕಾಯುವರಯ್ಯ ನೀ ದೂರ ನೋಡಿದರೆ

ಧಾರುಣಿಯಲ್ಲಿದ್ದ ಭಕುತರನಾ

ನಾರಾಯಾಣಾದುರಿತ ನಿವಾರಣ ಮುಖ್ಯ

ಕಾರಣ ಕರ್ತು ಶುಭಕರ ವೆಂಕಟರಮಣ॥ಪ॥


ಈ ಕಲಿಯುಗದಲಿ ನಿನ್ನ ಭಕುತರುಗಳನು

ಯೇಕ ದೇಶದಿ ಸ್ವಲ್ಪರು

ನಾ ಕಾಣುವೆನು ಅಸುರ ಜನರೆ ಬಹಳವಾಗಿ

ಭೀಕರಿಸುತಲೆರಗೋರು

ಈ ಕಲಿಗೆ ನೀ ವರವ ಇತ್ತ ಕಾರಣ

ಅವಾ ನಾನಾಕ ಪರಿಯಲಿ ದಣಿಸುವಾ

ನಾ ಕಾಣೆ ಸಾತ್ವಿಕ ಜನರಿಗೆ ಸಾಧನವು

ಯಾಕೆ ಸುಮ್ಮನೆ ಇದ್ದಿಹೆ ಎಲೋ ವೆಂಕಟಾ॥೧॥


ಅನಾಚಾರ ಅಗಮ್ಯಗಮನ ಮಿಥ್ಯಾಜ್ಞಾನ

ಅನೇಕ ಬಗೆ ಅಸಾಧನದಿ

ಹೀನ ವೃತ್ತಿಯಲಿ ಪ್ರವರ್ತಕರಾದ ಬಲು

ಹೀನ ಜೀವರುಗಳಿಗೆ

ನಾನಾ ಪರಿಯೈಶ್ಚರ್ಯಗಳನಿತ್ತು ಅವರಿಂದ

ಜ್ಞಾನಿಗಳನ್ನು ದಣಿಪೆ

ನಿನ್ನಿಂದ ಹೀಗೆ ಮಾಡಾ ಕುಳಿತಡಾಯಿತೆ

ಯೇನು ಗತಿಯೋ ಪ್ರಾಣಿಗಳಿಗೆ ದೇವಾ॥೨॥


ಕಲಿಯುಗದಲಿ ಯಿನ್ನು ಸಾಧನವೆಂಬುವಾ ತ್ರಿವಿಧ

ಫಲವು ಅಧಿಕ

ನೆಲೆ ಅರಿತು ಅವರವರ ನೀನು ಪೊರೆವದು ನಿನ್ನ

ಸಲೆ ಬಿರಿದಿಗಿನ್ನು ಉಚಿತಾ

ಸಲುವಾ ನಿಶ್ಚಯ ಜ್ಞಾನಿಗಳಿಗೆ ಯಿಂದುಟ್ಟುಡವುಂಟು

ಚಲಿಸುವರು ಮಧ್ಯಸ್ಥರು

ಭಳಿರೆ ಭಕುತರ ಪೊರವ ಬಿರಿದು ಬೇಕಾಗಿಲ್ಲೋ

ಖಳರುಕ್ಕ ತಗ್ಗಿಸೊದೆ ತಿಳಿವಿಕೆ ನಮಗೈಯ್ಯಾ॥೩॥


ಇನ್ನು ಕೆಲವು ಧರ್ಮನಡಿಸೆವೆಂಬೋದು ಯಿತ್ತೆ

ಇನ್ನೊಂದು ಬಿನ್ನೈಸುವೇ

ಚನ್ನಾಗಿ ಭಕತರನ ಭಯ ನಿವಾರಣ ಮಾಡಿ

ನಿನ್ನ ಸ್ಮರಣ್ಯಾಗುವಂತೆ

ಚನ್ನಾಗಿ ಒಬ್ಬ ಭಕುತನಲ್ಲಿ ನೀ ನಿಂತು

ಅನ್ಯೆ ಹೆಚ್ಚಗೊಡದೆ

ಇನ್ನಾವ ದೈತ್ಯರನ ಕೆಡಿಸಿ ನೀನು ಮತ್ತೆ

ಪುಣ್ಯ ಕರ್ಮಕೆ ಪ್ರವರ್ತಕನಾಗದಿರೆ ಇನ್ನು॥೪॥


ಇಷ್ಟು ಪರಿ ನೀಯಾಕೆ ಮೊರೆಯಿಡುವಿಯೆಂದರೆ

ಕಷ್ಟ ಬಹಳವು ಸಮಯ ಸಾತ್ವಿಕರಿಗೆ

ಶಿಷ್ಟರನ ಪೊರವಾದು ದುಷ್ಟರನ ತರಿವುವದು

ಇಷ್ಟೇವೆ ಸರಿ ನಿನ್ನ ಬಿರಿದಿಗಿನ್ನು

ಘಟ್ಯಾಗಿ ವರವನ್ನು ನೀಡವನೆಂತೆಂದು

ಇಟ್ಟೆನು ನಿನಗೆ ಮೊರಿಯಾ

ಶ್ರಿಷ್ಟಿಗೊಡೆಯ ನಮ್ಮ ಗೋಪಾಲವಿಠಲ ನೀ

ಬಿಟ್ಟು ಕೊಟ್ಟರೆ ಮತ್ತೆ ಬ್ಯಾರೆ ಇನ್ನೊಬ್ಬಿಲ್ಲಾ॥೫॥

***