Showing posts with label ಳಳ- RSS- ಎಚ್ಚರಗೊಳ್ಲಿ ಎಚ್ಚರಗೊಳ್ಳಿ ಕೆಚ್ಚೆದೆಯ others rss. Show all posts
Showing posts with label ಳಳ- RSS- ಎಚ್ಚರಗೊಳ್ಲಿ ಎಚ್ಚರಗೊಳ್ಳಿ ಕೆಚ್ಚೆದೆಯ others rss. Show all posts

Friday, 24 December 2021

ಎಚ್ಚರಗೊಳ್ಲಿ ಎಚ್ಚರಗೊಳ್ಳಿ ಕೆಚ್ಚೆದೆಯ others rss

   

RSS song .

ಎಚ್ಚರಗೊಳ್ಲಿ ಎಚ್ಚರಗೊಳ್ಳಿ ಕೆಚ್ಚೆದೆಯ ಸಿಂಹಗಳೇ |

ಎಚ್ಚರಗೊಳ್ಳಿ ಎಚ್ಚರಗೊಳ್ಳಿ ದಿಗ್ವಿಜಯದ ವ್ರತವಾದಿಗಳೇ |ಪ||


ಮುಚ್ಚಿದೆಯೈ ಶತಮಾನಗಳಿಂದ ಗರ್ಜನೆಗೈಯವ ವದನ

ಹೆಚ್ಚಿದೆ ಕೇಸರಿಗಳ ಸಾಮ್ರಾಜ್ಯದಿ ಅರಿಗಳ ನರಿಗಳ ಚಲನ

ಕಿಚ್ಚಿಕ್ಕಲು ಕಾನನ ಸಂಪತ್ತಿಗೆ ಕಾದಿದೆ ಶತ್ರು ಸಮೂಹ

ಅಚ್ಚರಿ ಇದು ವನರಾಜನಿಗೀಪರಿ ಮೈಮರೆವಿನ ವ್ಯಾಮೋಹ ||೧||


ಕವಿದಿರೆ ಗವಿಯೊಳು ಭೀಕರ ಕತ್ತಲು ಬೆಳಕಿಗದೆಲ್ಲಿದೆ ಸ್ಥಾನ?

ರವಿಕಿರಣದ ನಿರ್ಗಮನವು ಸಾಇದೆ ಭಾಸ್ಕರಗೆ ಅಪಮಾನ

ಆವರಿಸಿತೆ ಆರ್ಭಟದಾಸ್ಥಾನದಿ ಭಯ ಅಂಜಿಕೆ ಬರಿಮೌನ?

ಸಾವನೆ ಸಾಯಿಸಿ ಅರಳಿದ ಕಾಯವು ಆಯಿತೆ ಪೌರುಷಹೀನ? ||೨||


ಗಹಗಹಿಸಲಿ ಗಿರಿಗಹ್ವರ ಗುಹೆಗಳು ಬಾಯ್ದೆರೆಯಲಿ ಅನಲಾದ್ರಿ

ಭೋರ್ಗರೆಯಲಿ ಲಾವರಸಧಾರೆಯು ಸಿಡಿದೇಳಲಿ ಹೈಮಾದ್ರಿ

ಮೈ ಕೊಡಹಲಿ ಸಾಹಸ ಸಾಮ್ರಾಟರು ಮಾರ್ದನಿಸಲಿ ಗರ್ಜನೆಯು

ಪ್ರಲಯೇಶ್ವರನಾರಾಧನೆಗಿಂದು ನಡೆಯಲಿ ರುಧಿರಾರ್ಚನೆಯು ||೩||

***

eccaragoLli eccaragoLLi keccedeya siMhagaLE |

eccaragoLLi eccaragoLLi digvijayada vratavAdigaLE |pa||


muccideyai SatamAnagaLiMda garjanegaiyava vadana

heccide kEsarigaLa sAmrAjyadi arigaLa narigaLa calana

kiccikkalu kAnana saMpattige kAdide Satru samUha

accari idu vanarAjanigIpari maimarevina vyAmOha ||1||


kavidire gaviyoLu BIkara kattalu beLakigadellide sthAna?

ravikiraNada nirgamanavu sARide BAskarage apamAna

Avarisite ArBaTadAsthAnadi Baya aMjike barimouna?

sAvane sAyisi araLida kAyavu Ayite pouruShahIna? ||2||


gahagahisali girigahvara guhegaLu bAydereyali analAdri

BOrgareyali lAvarasadhAreyu siDidELali haimAdri

mai koDahali sAhasa sAmrATaru mArdanisali garjaneyu

pralayESvaranArAdhanegiMdu naDeyali rudhirArcaneyu ||3||

***