by ಗೋವಿಂದದಾಸ
ನಾರಾಯಣಯೆಂದರಾಗದೇ ನಿನ್ನಘೋರದುರಿತದೂರ ಹೋಗದೇವಾರಿಜನಾಭನ ವಲಿಸದೇನರಶಾರೀರದಲಿ ಬಂದು ಫಲವೇನಿದೆ1
ಸಾರಷಡ್ರಸಾನ್ನ ಭುಜಿಸುತ್ತಪರದಾರಾಂಶದಲಿ ಮನವಿರಿಸುತ್ತಾಕ್ರೂರಕೃತ್ಯವನಿತ್ಯಗೈಯ್ಯುತ್ತ ಯಮ-ನೂರಿಗೆ ಪೋಗುವದೇನು ಹಿತ2
ನಡೆವಾಗ ನುಡಿವಾಗ ಕುಡಿವಾಗ ವೀಳ್ಯಮಡಿವಾಗ ಕೊಡುವಾಗ ಪಡೆವಾಗ ಜಲಜನಾಭನಎಡಬಿಡದೀಗಾ ನೆನೆಕಡೆಗೆ ನಾಲಿಗೆ ಬಿದ್ದು ನುಡಿಯಲಾಗಾ3
ಈಶಣತ್ರಯದಲಿ ಸಿಲುಕುತ್ತಾ ಒಂದುನಶಿಸೆ ತಾಡಕಕೃತಿಗೈಯುತ್ತಾಎಸೆವ ಮೂರು ವೈರಾಗ್ಯ ತಾಳುತ್ತಾ ಸುತ್ತುಈಶ ತ್ರಿಮೂರ್ತಿ4
ಜನಿಸುತ್ತಲೇನ ತಂದಿರುವೆಯೋ ನಾಳೆತನುವನೀ ..... ಲೇನನೊಯ್ವೆನೊತನುಮಧ್ಯ ಭಾಗ್ಯದಿ ಮೆರೆವೆಯೋ ನಿನ್ನಜನುಮದ ನೆಲೆಯ ನೀನರಿವೆಯೊ5
ಇಂದುಸುಕರ್ಮ ಮಾಡದೆ ನೀನು ನಾಳೆಎಂದರೆ ತನುವಿಗೆ ನಿಜವೇನುಚಂದದಿ ಸ್ಮರಿಸು ಗೋವಿಂದನು ತಾನೆಬಂದು ದಾಸರ ನೋಡಿ ಪೊರೆವಾನು6
********