..
kruti: tandevaradagopala vittala (ಪ್ರಹ್ಲಾದಗೌಡರು)
ವಾಸುದೇವನ ದಾಸ ವಾಸುಕೀಭರಣನೇ ಭೂಷಾ ಪ
ವಾಸವಾದ್ಯಮರರಿಗೆ ತೋಷವ ಸುರಿಸುವ ಭಾವೀ ಭಾರತೀಶ ಅ.ಪ.
ಬಯಸಬಾರದ ಬಯಕೆಗಳಿಂದ ಬಾಧೆಗೊಳಗಾದೆನೊ ಬಾಧೆಗಳ ಬಿಡಿಸಿ ಭವದಿ ಭಕ್ತರೊಳು ಕೂಡಿಸೋ 1
ಕೊಟ್ಟವರ ಸಾಲವನು ಕೊಟ್ಟು ಮುಟ್ಟಿಸದೆ ದಿಟ್ಟತನದಿ ಬೆಂಬಿಟ್ಟು ಅಗಲದಲಿಟ್ಟು ಕೊಟ್ಟು ತೀರಿಸುವಂತೆಮಾಡೋ ಪ್ರೇಷ್ಯಾ 2
ಏಸೇಸು ಕಲ್ಪಕ್ಕೂ ದಾಸನೆಂಬುದು ಬಲ್ಯಲ್ಲಾ ಈಶ ನೀ ಗತಿಯೆಂಬುದು ಚೆನ್ನಾಗಿ ಬಲ್ಲೆ ಕಾರಣದಿ ಮೊರೆ ಪೊಕ್ಕ ತಂದೆವರದಗೋಪಾಲವಿಠ್ಠಲನಶರಣಾಗ್ರೇಸರಾ3
***