Showing posts with label ನಡೆದು ಬಾ ನಾಲ್ವರಿದ್ದೆಡೆಗೆ ಎನ್ನಯ್ಯನೆ purandara vittala. Show all posts
Showing posts with label ನಡೆದು ಬಾ ನಾಲ್ವರಿದ್ದೆಡೆಗೆ ಎನ್ನಯ್ಯನೆ purandara vittala. Show all posts

Friday, 6 December 2019

ನಡೆದು ಬಾ ನಾಲ್ವರಿದ್ದೆಡೆಗೆ ಎನ್ನಯ್ಯನೆ purandara vittala

ರಾಗ ನಾಟಕುರಂಜಿ ಮಟ್ಟೆ ತಾಳ 

ನಡೆದು ಬಾ ನಾಲ್ವರಿದ್ದೆಡೆಗೆ ಎನ್ನಯ್ಯನೆ
ನಮ್ಮ ನಿಮ್ಮ ತೊಡಕ ನಿರ್ಣಯಿಸಿಕೊಂಬೆನು ತೋಯಜಾಕ್ಷ ||ಪ||

ಆದಿಯಲ್ಲಿ ಎನ್ನ ಮತ್ತಾರು ನಿನ್ನ
ಪಾದಸೇವೆಯ ಮಾಡಿ ಹಲವು ಕಾಲ
ಸಾಧಿಸಿದರ್ಥವ ಸಲೆ ಎನ್ನ ಜೀವಕ್ಕೆ
ಆಧಾರವಾದುದನೇಕೆ ಕೊಡಲೊಲ್ಲೆ ||

ಸಾಲವ ಕೊಡವಲ್ಲೆ ಸಲೆ ಠೌಳಿಯ ಮಾಡಿ
ಕಾಲವ ಕಳೆವೆ ನೀ ಕಪಟದಿಂದ
ಮೇಲಾದ ವಿಬುಧರು ಮೆಚ್ಚುವಂತೆ ನಿನ್ನ
ಕಾಲಿಗೆ ಎನ್ನ ಕೊರಳ ಹತ್ತ ಕಟ್ಟುವ ||

ಸನಕಾದಿ ಮುನಿಗಳ ಸಾಕ್ಷಿಯಿಂದಲಿ ಎನ್ನ
ಮನಕೆ ಬಪ್ಪಂತೆ ನೀ ಘನ ನಂಬುಗೆಯಿತ್ತೆ
ಅನುಮಾನವೇಕಿನ್ನು ಪಾಲಿಸಯ್ಯ ಈಗ
ವನಜಾಕ್ಷ ತಂದೆ ಶ್ರೀ ಪುರಂದರವಿಠಲ ||
***

pallavi

naDedu bA nAlvariddeDege ennayyane namma nimma toDga nirNayisi kombenu tOyajAkSa

caraNam 1

Adiyalli enna mattAru ninna pAda sEveya mADi halavu kAla
sAdhisidarttava sale enna jIvakke AdAravAdudanEke koDalolle

caraNam 2

sAlava koDa valle sale DhauLiya mADi kAlava kaLeve nI kapaDadinda
mElAda vibudharu meccuvante ninna kAlige enna koraLa hatta kaTTuva

caraNam 3

sanakAdi munigaLa sAkSiyindali enna manage bappante nI ghana nambugeyitte
anumAnavEkinnu pAlisayya Iga vanajAkSa tande shrI purandara viTTala
***