Showing posts with label ಯಾರಗೊಡವೆ ಯಾಕೋ ಮತ್ತಿನ್ನಾರ ಸಂಗವೇಕೋ krishnavittala. Show all posts
Showing posts with label ಯಾರಗೊಡವೆ ಯಾಕೋ ಮತ್ತಿನ್ನಾರ ಸಂಗವೇಕೋ krishnavittala. Show all posts

Wednesday, 1 September 2021

ಯಾರಗೊಡವೆ ಯಾಕೋ ಮತ್ತಿನ್ನಾರ ಸಂಗವೇಕೋ ankita krishnavittala

 ರಾಗ: ಕೇದಾರಗೌಳ ತಾಳ: ತ್ರಿಪುಟ


ಯಾರಗೊಡವೆ ಯಾಕೋ ಮತ್ತಿನ್ನಾರ ಸಂಗವೇಕೋ


ನರಹರಿಭಕ್ತ ಶ್ರೀ ಗುರು ರಾಘವೇಂದ್ರರ ದಯವೊಂದಿದ್ದರೆ ಸಾಕೋ ಅ.ಪ


ಯಾರು ಒಲಿದರೇನು ಮತ್ತಿನ್ನಾರು ಮುನಿದರೇನು

ಹರಿದಾಸಾಗ್ರಣಿ ಗುರು ರಾಘವೇಂದ್ರರ ದಯವಿರಲು 1

ಯಾರು ಪೊಗಳಲೇನು ಮತ್ತಿನ್ನಾರು ತೆಗಳಲೇನು

ಪರಮದಯಾಕರ ಯತಿರಾಜೇಂದ್ರರ ದಯವೊಂದಿರಲು 2

ಯಾರ ಪ್ರೇಮವೇಕೋ ಮತ್ತಿನ್ನಾರ ದ್ವೇಷವೇಕೋ

ಪರಮಾತ್ಮನಪ್ರಿಯ ಗುರುಸಾರ್ವಭೌಮರ ಸೇವೆಯೊಂದಿರಲು 3

ಮಾನ ಕಳೆದರೇನು ಮತ್ತೆ ಜ್ಞಾನಿ ಎಂದರೇನು

ಮಾನಿತ ಶ್ರೀ ಗುರು ರಾಘವೇಂದ್ರರ ಸೇವೆಯೊಂದೆ ಸಾಕು 4

ಅರ್ಥ ದೊರೆತರೇನು ವಿತ್ತ ದುವ್ರ್ಯರ್ಥವಾದರೇನು

ಆರ್ತರರಕ್ಷಿಪ ಗುರುವರೇಣ್ಯರ ಸೇವೆಯೊಂದೆ ಸಾಕು 5

ಸತಿಯುಸುತರು ಅವರು ಮತ್ತಿನ್ನು ತೊರೆದು ಪೋದರೇನು

ಗತಿಯನುತೋರುತ ಸತತವುಪಾಲಿಪ ಯತಿವರೇಣ್ಯರ ಸೇವೆಯೊಂದಿರಲು 6

ಭಕ್ತರನ್ನ ಪೊರೆವ ಮತ್ತವರಘವನೆಲ್ಲ ತರಿವ

ಶಕ್ತಶ್ರೀಕೃಷ್ಣವಿಠಲನಂಘ್ರಿಯ ಸೇವೆಯೊಂದೆ ಸಾಕು 7

***