Showing posts with label ಳಳ- RSS- ಸಂಘ ಸೂತ್ರದ್ಹಾಂಗ ಕೇಶವ others rss. Show all posts
Showing posts with label ಳಳ- RSS- ಸಂಘ ಸೂತ್ರದ್ಹಾಂಗ ಕೇಶವ others rss. Show all posts

Friday, 24 December 2021

ಸಂಘ ಸೂತ್ರದ್ಹಾಂಗ ಕೇಶವ others rss

   

RSS song .

ಸಂಘ ಸೂತ್ರದ್ಹಾಂಗ ಕೇಶವ ಮಾಧವ ನುಡಿದ್ಹಾಂಗ

ಕೂಡ್ಯಾಡಿ ನಲಿಯೋಣ ಬಲಾಢ್ಯ ಭಾರತ ಕಟ್ಟೋಣ ||ಪ||


ಒಂದಕ್ಕೊಂದು ಕೂಡಿ ಪ್ರತಿದಿನ ಶಾಖೆಗೆ ಹೋಗೋಣ

ಮಾತೃಭೂಮಿ ಸ್ಮರಿಸಿ ರಾಷ್ಟ್ರದ ಚಿಂತನೆ ಮಾಡೋಣ

ಭಗವೆಯ ಅಡಿಯಲ್ಲಿ ಶಿರವನು ಬಾಗಿಸಿ ನಲಿಯೋಣ

ಹಿಂದು ಹಿಂದು ಒಂದು ರಾಷ್ಟ್ರದ ಕಲ್ಪನೆ ತರಿಸೋಣ ||೧||


ಕಬಡಿ ಕಬಡಿ ಆಡಿ ದೇಹವ ದಣಿಸುತ ನಲಿಯೋಣ

ಯೋಗ ದಂಡ ಕಲಿತು ಶಕ್ತಿಯ ಸಂಚಯ ಮಾಡೋಣ

ಬಡಬಡನೆ ಲಾಠಿ ತಿರುವಿ ದ್ವಂದ್ವದ ಆಟವ ಆಡೋಣ

ವೇತ್ರಚರ್ಮ ರಪ್ ರಪ್ ಗಪ್ಪಂತ ತಪ್ಪಿಸಿಕೊಳ್ಳೋಣ ||೨||


ಅಸ್ಸಾಮ ಪಂಜಾಬ ಕಾಶ್ಮೀರದ ಕಡೆ ನೋಡೀಗ

ಮತ್ತೆ ನಾಡ ಹತ್ಯೆ ಆದರೆ ಯಾರಿಗೆ ಕೇಳೋಣ

ಒಳಜಗಳ ಸ್ವಾರ್ಥ ಮರೆತು ದೇಶದ ಐಕ್ಯತೆ ಬಯಸೀಗ

ವಿಶ್ವ ಹಿಂದು ಬಂಧು ಸಂಘದ ಶಾಖೆಗೆ ಸೇರೋಣ ||೩||

***

saMGa sUtrad~hAMga kESava mAdhava nuDid~hAMga

kUDyADi naliyONa balADhya BArata kaTTONa ||pa||


oMdakkoMdu kUDi pratidina SAKege hOgONa

mAtRuBUmi smarisi rAShTrada ciMtane mADONa

Bagaveya aDiyalli Siravanu bAgisi naliyONa

hiMdu hiMdu oMdu rAShTrada kalpane tarisONa ||1||


kabaDi kabaDi ADi dEhava daNisuta naliyONa

yOga daMDa kalitu Saktiya saMcaya mADONa

baDabaDane lAThi tiruvi dvaMdvada ATava ADONa

vEtracarma rap rap gappaMta tappisikoLLONa ||2||


assAma paMjAba kASmIrada kaDe nODIga

matte nADa hatye Adare yArige kELONa

oLajagaLa svArtha maretu dESada aikyate bayasIga

viSva hiMdu baMdhu saMGada SAKege sErONa ||3||

***