..
kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಭವಾನಿ ಕ್ಷೇತ್ರಸ್ತ ಸಂಗಮೇಶ್ವರ ಸ್ತೋತ್ರ
ಸಂಗಮೇಶ್ವರ ಶರಣು ಸದಾಶಿವ
ಸಂಗಮೇಶ್ವರ ರಂಗ ಶ್ರೀಪತಿಯರ ಅಚಲಭಕ್ತಿಯನಿತ್ತು
ಭಂಗವಿಲ್ಲದೆ ಪರಿಪಾಲಿಸೋ ಎನ್ನ ನೀ ಪ
ರಮ್ಯ ಭವಾನಿ ಕಾವೇರಿ ಸಂಗಮದಲಿ |
ಉಮೆ ಸಹಿತದಿ ನಿಂತು ಎಮ್ಮ ಪಾಲಿಸುತಿ ನೀ || 1
ಅಮರ ಸುಮನಸ ವೃಂದಾರಾಧ್ಯನೇ |
ಷಣ್ಮುಖ ಗಜಮುಖ ತಾತ ಕೃಪಾನಿಧೆ 2
ಶುದ್ಧ ಸ್ಪಟಿಕಾಮಲ ನಿರ್ಮಲ ಕಾಯನೆ |
ದುಗ್ಧ ಸಾಗರ ಭವಶೇಖರ ಶಂಕರ |
ಸ್ನಿಗ್ಧ ಲೋಹಿತ ಜಟಾಜೂಟಿ ಗಂಗಾಧರ |
ಮೃತ್ಯುಂಜಯ ಅಹಿಭೂಷಣ ಶರಣು 3
ಅಸಿತ ಲೋಹಿತ ಸಿತ ಶ್ಯಾಮ ವಿಧ್ಯುನ್ನಿಭ |
ಭಾಸಿಪ ಪಂಚ ಸುವದನ ತ್ರಿಲೋಚನ |
ಈಶಾನಮಃ ದೇವನೇ ವೇದ ನಾಯಕಿ ಪತಿಯೇ |
ಅಜಪಿತ ಪ್ರಸನ್ನ ಶ್ರೀನಿವಾಸಗೆ ಪ್ರಿಯ 4
***