..
ಬಾರೈ ಪ್ರಭುವೆ ಬಾರೈ ಪ್ರಭುವೆ ಪ
ತೋರೈ ಹರಿಪಾದವ ಗುರುವೆ
ತವಾಂಘ್ರಿ ಕಮಲ ನಂಬಿದೆ
ಭವ ಬಂಧನ ಹರಿಸಿ ಕರುಣದಿ
ಜವನ ಭವನ ಬಿಡಿಸೋ ದೀನ
ದಿವಿಜ ತರುವೆ1
ಹರಿಕಥಾ ಸುಧಾ ಸಾರ
ವರ ರಹಸ್ಯವ ಪೊರೆ
ಕರುಣದಿಂದಲರುಹಿಸದಾ
ಪೊರೆಯೋ ವಿಭುವೆ 2
ಮಂದರ ಗಿರಿಧಾರಿ ಶಾಮ
ಸುಂದರ ಸುಪ್ರೇಮ ಪಾತ್ರ
ಕಂದನನುದಾಶಿಸುವದು
ತಂದೆಗೆ ಥರವೆ 3
***