Showing posts with label ಆಗಲಾಗಲಿ ರಂಗಯ್ಯ ನಿಮ್ಮಯ್ಯಗೆ purandara vittala. Show all posts
Showing posts with label ಆಗಲಾಗಲಿ ರಂಗಯ್ಯ ನಿಮ್ಮಯ್ಯಗೆ purandara vittala. Show all posts

Wednesday 4 December 2019

ಆಗಲಾಗಲಿ ರಂಗಯ್ಯ ನಿಮ್ಮಯ್ಯಗೆ purandara vittala

ರಾಗ ಪಂತುವರಾಳಿ ಅಟ ತಾಳ

ಆಗಲಾಗಲಿ ರಂಗಯ್ಯ, ನಿಮ್ಮಯ್ಯಗೆ
ಹೋಗಿ ಹೇಳುವೆನು ನಾನು ||ಪ||

ಮೊಸರ ಕಡೆವ ವೇಳ್ಯದಿ, ನೀ ಪಿಡಿದೆಯೊ
ಮಿಸುನಿಯ ಕಡೆಗೋಲ
ಹಸುಮಗನೇ ನೀನು, ಮೋಸದಿ ಬಂದು
ನುಸುಳದೆ ತೆರಳೆಂದಳು

ಬೇರಿರಿಸಿದೆ ಮೊಸರು, ಹಾಲು ಪಾತ್ರೆ
ಸಾರಿ ಹೇಳುವೆ ನಿನಗೆ
ಮೀರಿ ಮುಟ್ಟಿದರೆ ನಿನ್ನ ಕಿವಿ ಮೂಗ
ಮೂರು ಕೊಯ್ಯುವೆನೆಂದಳು

ಗಿಂಡಿಪಾಲನು ಸುರಿದು, ರಂಗಯ್ಯ ನೀ
ಕೊಂಡೆಯೇತಕೆ ಬೆಣ್ಣೆಯ
ಲಂಡತನವ ಮಾಡಿದೆ, ಕಣ್ಣಿಗೆ ನಿಂಬೆ
ಹಿಂಡುವೆ ತಾನೆಂದಳು

ಅಡಿಗೆಯ ಮನೆಯ ಪೊಕ್ಕು, ನೊರೆಹಾಲ
ಕುಡಿವುದಿದೇನು ಸೊಕ್ಕು
ಬಡೆದು ಗಲ್ಲದಲಿ ನಿನ್ನ, ಕೈಗಳನು
ಹಿಡಿದು ಕಟ್ಟುವೆನೆಂದಳು

ಅಂದ ಮಾತನು ಕೇಳುತ, ಕೃಷ್ಣಯ್ಯ ತಾ-
ನೆಂದೆಂದು ಬರೆನೆನ್ನುತ
ತಂದೆ ಪುರಂದರವಿಠಲ, ಸಂಸಾರ-
ದಂದಕೆ ನಗುತಿದ್ದನು
***

pallavi

AgalAgali rangayya nimmayyage hOgi hELuvenu nAnu

caraNam 1

mosara kaDeva vELyadi nI piDideyo misuniya kaDegOla
hasumaganE nInu mOsadi bandu nusuLade teraLendaLu

caraNam 2

bEririside mosaru hAlu pAtre sAri hELuve ninage
mIri muccidare ninna kivi mUga mUru koyyuvenendaLu

caraNam 3

giNDibAlanu suridu rangayya nI koNDeyEtake beNNeya
laNDatanava mADide kaNNIge nimbe hiNDuve tAnendaLu

caraNam 4

aDigeya maneya pokku norehAla kuDivudidEnu sokku
baDidu galladali ninna kaigaLanu hiDidu kaTTuvenendaLu

caraNam 5

anda mAtanu kELuta krSNayya tAnendendu barenennuta
tande purandara viTTala samsAra tandage nagutiddanu
***