ವ್ಯಾಸಗಣನಾಥ ನಮೋ ವೇದವ್ಯಾಸ
ದೋಷದೂರ ಶುಭಗುಣನೀಲಕಾಯ ll ಪ ll
ತ್ರಾಸಾದಿದೋಷಭೇಷಜ ಪಶುಪತೇ
ಅಸಮರಸಪ್ರದ ಕುಸುಮಹಾಸ ll ಅ ಪ ll
ವಿಷಮಹೆಣ್ಣಿನಲಿ ಅಂಜದೆ ಜನಿಸಿ
ಅಸಮಜ್ಞಾನಕಾರ್ಯವನು ಮಾಡಿ ನೀ
ಋಷಿವಂದಿತಗುರುವಾಗಿ ಮೆರೆದೆ
ಹ್ರಸಿತವಾಗಲಿಲ್ಲ ನಿನ್ನ ಮಹಿತ್ವ ll 1 ll
ಘ್ರುತಾಚಿಯಲಿ ಹುಸಿಕಾಮವ ತೋರಿ
ಉತ್ಪಾದಿಸಿ ಶುಕನ ಸೃಷ್ಟತೇಜದಿ
ಕೃತ್ತಿವಾಸನೊಲುಮೆಯಿಂದೆಂದು ಭ್ರಾಂತಿ
ವಿತ್ತೆ ನೀ ಹೀನರಿಗೆ ಪರ್ಯಾಪ್ತಕಾಮ ll 2 ll
ಕಾಮಾದಿದೋಷಧಾಮನಾದರೆ ಅಮಿತ
ಧಾಮವೆಲ್ಲಿ ಅಸ್ತ್ರವ ನಿರೋಧಿಸಲು
ನಮ್ಮ ಶ್ಯಾಮಲ *ವಿದ್ಯೇಶವಿಟ್ಠಲ*ಗೆ
'ಆತ್ಮತಂತ್ರ'ನೀತ ಕಾಮಾದಿರಹಿತ ll 3 ll
***