ಎಂದು ಕಾಂಬೆನು ಎನ್ನ ಸಲಹುವ ಬಂಧು ಬಳಗ ನಮ್ಮಪ್ಪನ ||
ತಿರುಪತಿಯಲಿ ಇಪ್ಪನ ವರಾಹ ತಿಮ್ಮಪ್ಪನ ||ಪ||
ದಂಡಿಗೆಯನು ಬಾರಿಸುತಲಿ ಶ್ರುತಿಗೂಡಿಕೊಂಡು ಪಾಡುತ ||
ಮನದಿ ಲೋಲ್ಯಾಡುತ ಕುಣಿಕುಣಿದಾಡುತ ||೧||
ಬೆಟ್ಟದೊಡೆಯನ ಚರಣಕಮಲಕೆ ಶಿರವಿಟ್ಟು ಕರಗಳ ||
ಮುಗಿವೆ ನಾ ಕವಕವ ನಗುವೆ ನಾ ಎನ್ನೊಡೆಯನಾ ಪೊಗಳಿ ನಾ ||೨||
ಸ್ವಾಮಿ ಪುಷ್ಕರಿಣಿಯಲ್ಲಿ ಸ್ನಾನ ನೇಮವ ಮಾಡುವೆ ||
ಪುಣ್ಯಕ್ಷೇತ್ರವ ನೋಡುವೆ, ಹಯವದನನ ಕೊಂಡಾಡುವೆ ||೩||
***
eMdu kAMbenu enna salahuva baMdhu baLaga nammappana ||
tirupatiyali ippana varaaha timmappana ||pa||
daMDigeyanu bArisutali SrutigUDikoMDu pADuta ||
manadi lOlyADuta kuNikuNidADuta ||1||
beTTadoDeyana caraNakamalake SiraviTTu karagaLa ||
mugive nA kavakava naguve nA ennoDeyanA pogaLi nA ||2||
svAmi puShkariNiyalli snAna nEmava mADuve ||
puNyakShEtrava nODuve, hayavadanana koMDADuve ||3||
***
ಎಂದು ಕಾಂಬೆನು ಎನ್ನ ಸಲಹುವಬಂಧುಬಳಗ ನಮ್ಮಪ್ಪನ ತಿರುಪತಿಲಿಪ್ಪನವರಾಹ ತಿಮ್ಮಪ್ಪನ ಪ.
ದಂಡಿಗೆಯ ಬಾರಿಸುತ ಶ್ರುತಿಗೂಡಿ-ಕೊಂಡು ಪಾಡುತ ಮನದಿ ಲೋಲ್ಯಾಡುತಕುಣಿಕುಣಿದಾಡುತ 1
ಬೆಟ್ಟದೊಡೆಯನ ಚರಣಕಮಲಕೆ ಶಿರ-ವಿಟ್ಟು ಕರಗಳ ಮುಗಿವೆ ನಾ ಕವಕವನಗುವೆ ನಾಎನ್ನೊಡೆಯನ ಪೊಗಳಿ ನಾ2
ಸ್ವಾಮಿಪುಷ್ಕರಿಣಿಯಲ್ಲಿ ಸ್ನಾನ ನೇಮ-ವ ಮಾಡುವೆ ಪುಣ್ಯಕ್ಷೇತ್ರವ ನೋಡುವೆಹಯವದನನ ಕೊಂಡಾಡುವೆ 3
***