ತಂದು ತೋರೆ ಶ್ರೀ ಮುಕುಂದನ ಗೋವಿಂದನಎಂದೆಂದುಡುಪಿಲಿ ನಿಂದನ ಗೋವಿಂದನ ಪ.
ದಂಡಪಾಶಧರನು ಭೂಮಂಡಲದಿ ಮುನಿಗಳಹೆಂಡರಿತ್ತ ಭಿಕ್ಷೆಯುಂಡನ ಚೆಲ್ವಕುಂಡಲ ಮಂಡಿತ ಗಂಡನ ಉ -ದ್ದಂಡ ಕಠೋರ ಪ್ರಚಂಡನ ಗೋವಿಂದನ 1
ಹಾರ ಪದಕ ಕಂಕಣ ಕಿರುಗೆಜ್ಜೆ ಉಡು -ದಾರ ವೀರ ಪೆಂಡ್ಯಗಳಿಟ್ಟನ ತನ್ನಸೇರ್ದರಿಗಿಷ್ಟವ ಕೊಟ್ಟನನೀರಸ ಜನರ ಬಿಟ್ಟನ ಗೋವಿಂದನ2
ಮಂದಹಾಸವೆಂಬ ನವಚಂದ್ರಿಕೆಯಿಂದೆಸೆವ ಮುಖಇಂದುವಿನ ನೀರಜಾಕ್ಷನ ನವಚಂದನ ಕರ್ಚಿತವಕ್ಷನಎಂದೆಂದು ಭಕ್ತರ ಪಕ್ಷನ ಗೋವಿಂದನ 3
ಮಂದಜಜಾಂಡಾದಿಂದ್ರ ಮುಖ್ಯ ವೃಂದಾರಕರೊಡೆಯನಇಂದಿರೆಯಪ್ಪುವ ತೋಳ್ಗಳ ಶುಭಕುಂದ ಕುಟ್ಮಲ ಪಲ್ಗಳಅಂದುಗೆ ಒಪ್ಪುವ ಕಾಲ್ಗಳ ಗೋವಿಂದನ 4
ಇಂದು ಹಯವದನನ್ನ ಸಂದೇಹವ ಕಳೆಯುತ್ತ ಆ-ನಂದದಿಲ್ಲಿಗೆ ಬಂದನಚಂದದಿ ವೇದವ ತಂದನ ಆನಂದನ ರಾಣಿಯ ಕಂದನ ಗೋವಿಂದನ 5
***