ಕೃತಿ ಕಳಸದ ಸುಂದರಮ್ಮ
ಇಲ್ಲಿ ಬಾ ಇಲ್ಲಿ ಬಾ ಮೆಲ್ಲ ಮೆಲ್ಲನೆ ಹೆಜ್ಜೆಯನಿಕ್ಕುತ
ಪುಲ್ಲನಾಭ ಗೋಪಾಲಕೃಷ್ಣ ಗೊಲ್ಲರೊಡಗೂಡಿ ಪ.
ಪಾಲು ಮೊಸರು ಬೆಣ್ಣೆ ಕೊಡುವೆ ಬಾ
ಗೋಲಿ ಗುಂಡು ಗಜಗನೀಡುವೆ ಬಾ
ಆಲಯ ಪೊಕ್ಕು ಧೂಳಿ ಮಾಡಲು ಬ್ಯಾಡ 1
ಅಂಗಳದೊಳು ಬಾ ಬೆಳದಿಂಗ ತೋರುವೆನು
ರಂಗು ಮಾಣಿಕ್ಯದುಂಗರ ನಿಡುವೆನು ಮಂಗಳಾಂಗನೆ 2
ಮೃದನಯ್ಯನೆ ಬಾ ಸುದತಿಯರೊಡಗೂಡಿ ಬಾ
ಸಡಗರದಿ ನೀ ಬಾ ಕಾಳೀಮರ್ಧನಕೃಷ್ಣ ಬಾ 3
****