Audio by Vidwan Sumukh Moudgalya
ಶ್ರೀ ವ್ಯಾಸರಾಜರು ರಚಿಸಿರುವ ಶ್ರೀ ಶ್ರೀಪಾದರಾಜರ ಸ್ತೋತ್ರ ಪದ
ರಾಗ : ಬಿಲಹರಿ ಆದಿತಾಳ
ಪರಮತ ಘನವನ ಪಾವಕನೆ
ಶರಣು ಭೂಸುರನುತ ಸಿರಿ ನಾರಾಯಣಯೋಗಿ॥ಪ॥
ಧರೆಯಲ್ಲಿ ಮೂರೇಳು ಕುಮತರ ಭಾಷ್ಯವ
ಕಿರಕು ಹಾವಿಗೆಯಂದದೀ ರಚಿಸಿ
ಚರಣಾದಿಂದಲಿ ತುಳಿದು ಶತ್ರು ಖಳರ ಕರದು
ಮೊರೆಯಿಡುತಿವೆ ಶಾಸ್ತ್ರಾ ಶರಿಯ ಬಿಡಿಸಿರೆಂಬ॥೧॥
ಸಿರಿಕೃಷ್ಣನ್ನ ಧ್ಯಾನದೊಳಿರೆ ವ್ಯಾಸಮುನಿರಾಯ
ಗುರಗಾ ಬಂಧಿಸಲು ಧ್ಯಾನದಿ ತಿಳಿದು
ಮರುತಾವೇಗದಿ ಬಂದು ಫಣಿಯೊಡನೆ ಭಾಷಿಸೆ ತೊ-
ಡರು ಬಿಡಿಸಿದ ಅಹಿಪಾಶದ ಗುರುರಾಯ॥೨॥
ಸುರನಾಥಪುರಕಂದು ಘನಪುಷ್ಪ ವಿಮಾನದಿ
ಸುರುವುತ್ತಲೆರೆ ರಘುನಾಥೇಂದ್ರರ
ವರವೃಂದಾವನ ಪ್ರದಕ್ಷಿಣೆಯೊಳುನೀಕ್ಷಿಸೆ
ಕರದು ಭಾಷಿಸೆ ಕಳುಹಿದಾಶ್ಚರ್ಯ ಚರಿತ॥೩॥
ಸುರತರುವಿನಂದದಿ ಬೇಡಿದಿಷ್ಟಾರ್ಥವ
ಕರದಿತ್ತ ಈ ಬುಧಜನರಿಗೆಲ್ಲ
ನರನೊಬ್ಬ ದೂಷಿಸೆ ನೋಡಿ ಆ ಕ್ಷಣದಲ್ಲಿ
ಅರಕ್ಷಣಕವನ ತನು ಬಿರಿಯೆ ರಕ್ಷಿಸಿದೆ॥೪॥
ಸಿರಿಕೃಷ್ಣನ್ನ ಪಂಕಜ ಮಧುಪನೆನಿಪ
ವರಹೇಮತೀರ್ಥರ ಮುನಿ ಕುವರಾ
ಸುರನರರೊಳಗೆ ಪ್ರಖ್ಯಾತ ಮಂಗಳ ಕಾಯ
ಅರಿಶರಭ ಭೈರುಂಡನೆನಿಪ ಶ್ರೀಪಾದರಾಯ॥೫॥
****
ಶ್ರೀಪೂರ್ಣಬೋಧ ಕುಲವಾರ್ಧಿ ಸುಧಾಕರಾಯ
ಶ್ರೀವ್ಯಾಸರಾಜ ಗುರವೇ ಯತಿಶೇಖರಾಯ।
ಶ್ರೀರಂಗವಿಟ್ಠಲ ಪದಾಂಬುಜ ಬಂಭರಾಯ
ಶ್ರೀಪಾದರಾಜಗುರವೇಸ್ತು ನಮಶ್ಯುಭಾಯ॥
***