Showing posts with label ಳಳ- ಭಾವಗೀತೆ- ಹಾವಿ ಹಾವಿ ರಂಗಯ್ಯ others HAAVI HAAVI RANGAYYA. Show all posts
Showing posts with label ಳಳ- ಭಾವಗೀತೆ- ಹಾವಿ ಹಾವಿ ರಂಗಯ್ಯ others HAAVI HAAVI RANGAYYA. Show all posts

Monday, 22 November 2021

ಹಾವಿ ಹಾವಿ ರಂಗಯ್ಯ others HAAVI HAAVI RANGAYYA

 

2025

singer- ಶ್ರೀಮತಿ ಸಾವಿತ್ರಿ ಸತ್ಯೇಂದ್ರ ರವರು.  

lyrics- ಶ್ರೀ ವಿಜಯ್ ಬರ್ತೂರ್ 


ಹಾವಿ ಹಾವಿ ರಂಗಯ್ಯ... 

ಹಾವಿ ಮುದ್ದು ರಂಗಯ್ಯ, 

ಕಣ್ಣಿಗೆ ನಿದ್ರೆ ತಾರಯ್ಯಾ. . . 

ಹಾವಿ ಹಾವೀ ರಂಗಯ್ಯಾ. . . 


ಅಳಬೇಡ ಕಂದಮ್ಮ ಬೇಕಾದ್ದು ನಿನಗೀದೇ . . 

ನಾಲ್ಕೆಮ್ಮೆ ಕರೆದ ನೊರೆ ಹಾಲೂ. . . 

ನಾಲ್ಕೆಮ್ಮೆ ಕರೆದ ನೊರೆ ಹಾಲೂ. . . 

ನೀ ಕೇಳಿದಾಗ ನಾ ಕೊಡುವೇ. . . . 


ಹಾವಮ್ಮ. .   ಹಾವಿ ಹಾವೀ. . .

ಹಾವಮ್ಮ. .   ಹಾವಿ ಹಾವೀ.


ಅತ್ತಾರು  ಅಳಲಮ್ಮ ಹಸುಗೂಸು ನಮಗಿರಲೀ,. . 

ಕೆಟ್ಟಾರು ಕೆಡಲಿ ಮನೆ ಕೆಲಸಾ.... 

ಮನೆ ಕೆಲಸ ಕೆಟ್ಟಾರೂ. . . 

ಮಕ್ಕಳಾ ಆಟ ನಮಗಿರಲೀ. .  


ಹಾವಮ್ಮ. .   ಹಾವಿ ಹಾವೀ

ಹಾವಮ್ಮ. .   ಹಾವಿ ಹಾವೀ. .


ಅಳುವಾ ಕಂದನ ತುಟಿಯು ಹವಳಾದ ಕುಡಿ ಹಾಂಗ

ಎಳೆಹುಬ್ಬು ಬೇವಿನ ಎಸಳ್ಹಾಂಗ

ಕಣ್ಣೋಟ ಶಿವನ ಕೈಯಲಗು ಹೊಳೆಧಾಂಗ


ಹಾವಮ್ಮ....ಹಾವೀ ಹಾವೀ

ಹಾವಮ್ಮ.... ಹಾವೀ ಹಾವೀ


ಕೂಸಿರುವ ಮನಿಗೇ ಬೀಸಣಿಗೆ ಯಾತಕ್ಕ

ಕೂಸು ಕಂದಯ್ಯ ಆಡಿದರಾ..

ಒಳ ಹೊರಗ... ತಂಗಾಳಿ ಬಳಿಗೇ

ಸುಳಿದಾವು


ಹಾವಮ್ಮ ಹಾವೀ ಹಾವೀ

ಹಾವಮ್ಮ ಹಾವೀ ಹಾವೀ


(ತ್ರಿಪದಿಯ ಮಟ್ಟು. ಎರಡನೆ ಸಾಲನ್ನು ಪುನರಾವರ್ತಿಸಬಹುದು.)

***