Showing posts with label ಗುಂಜಾ ನರಸಿಂಹಾ ಪಾಹಿ ಮಾಂ ಪಾಹಿ uragadrivasa vittala. Show all posts
Showing posts with label ಗುಂಜಾ ನರಸಿಂಹಾ ಪಾಹಿ ಮಾಂ ಪಾಹಿ uragadrivasa vittala. Show all posts

Monday, 2 August 2021

ಗುಂಜಾ ನರಸಿಂಹಾ ಪಾಹಿ ಮಾಂ ಪಾಹಿ ankita uragadrivasa vittala

ಗುಂಜಾ ನರಸಿಂಹಾ ಪಾಹಿ ಮಾಂ ಪಾಹಿ ಪ


ಅಜಭವ ಫÀಣಿ ದ್ವಿಜರಾಜ ಸುಪೂಜಿತ

ತ್ರಿಜಗದೊಡೆಯ ನರಹರಿಯೆ-ದುರಿತ ಹರಾ ಅ.ಪ


ಪಟುತರ ಭಾಧೆ ಸಂಕಟಪಡುತಲಿ ಸುರ-

ಕಟಕ ನುತಿಸಿ ಕೋಟಿತಟಿತ್ಕಾಯನೆ

ಕೋಟಿ ಖಳರೆದೆ ಕುಟ್ಟಿ ಯಮಪುರ

ಕಟ್ಟಿ ದಿಟ್ಟತನದಲಿ ನಿಶಾಚರನಳುಹಿದ 1


ಸಿಡಿಲೋಪಮ ಘುಡು ಘುಡಿಸುತ ಕಿಡಿಯ

ಕಡೆಗಣ್ಣಿಂದಲಡಿಗಡಿಗುಗುಳುತ

ಕೂಡಿನಖಗಳ ನೀಡಿಶಿರವನ-

ಲ್ಲಾಡಿಸಿ ಜಡಜಂಗಮರ ನಡುಕ ಬಿಡಿಸಿದೆಯೊ2


ಅಡಿಗಡಿಗೆಡರನು ಪಡುತಿಹ ಹುಡುಗನ

ದೃಢತರ ಭಕುತಿಯ ನುಡಿಯುನು ಕೆÉೀಳುತ

ನೋಡಿ ಅಭಯವ ನೀಡಿ ನೀ ದಯ

ಮಾಡಿ ಬಿಡುಗಣ್ಣರನು ಬಿಡದೆ ಸಲಹಿದೆಯೊ 3


ಕಾಳ ರಕ್ಕಸರ ಬಾಧೆಗಳಿಂದ

ಗೋಳಾಡುತ ನಿನ್ನಡಿಗಳ ಸ್ತುತಿಸೆ

ಕೇಳಿ-ಹರುಷವ ತಾಳಿ-ದನುಜರ

ಧೂಳೀಪಟಮಾಡಿ ನಲಿದು ನಿಂದಾಡಿದೆ 4


ಸಿಂಧುಶಯನ ಭವಬಂಧವಿಮೋಚಕ

ಇಂದಿರೆಯರಸ ಶ್ರೀ ವೇಂಕಟೇಶ ನೀ

ಬಂದೂ ಸ್ತಂಭದಿ ನಿಂದೂ ಭಕುತರ

ಬಂಧೂ ಸುರವೃಂದಕೆ ಆನಂದವ ನೀಡಿದ 5


ಕಡಲುಗಳೇಳಡಿಗಡಿಗುಕ್ಕುತ

ಉಡುಗಡಣಗಳು ಪಥ ತಪ್ಪಿ ಬೀಳುತಲಿರೆ

ದಾಡಿ ಕುಣಿದಾಡೀ ಸ್ಮಶ್ರುಗಳ

ತೀಡಿ ಬಡಬಾನಲಲ್ಲಾಡಿಸಿ ನಿಂದ 6


ಪರಿಪರಿ ಸುರರವಯವಗಳನು ಧರಿಸಿ

ಉರುತರ ಕ್ರೀಡೆಯ ಮಾಡಿ ಪ್ರಳಯದಿ

ತೋರಿ ಧಿಕ್ಕರಿಸಿ ತಾಳಿ ಹರುಷದಿ

ಕೇಳಿಯೊಳು ಉರಗಾದ್ರಿವಾಸವಿಠಲ ನೀ ನಿಂದೆಯೊ 7

****