Showing posts with label ಕಾಯೆ ಕಾಯೆ ಶ್ರೀ ಹರಿಜಾಯೆ shree krishna. Show all posts
Showing posts with label ಕಾಯೆ ಕಾಯೆ ಶ್ರೀ ಹರಿಜಾಯೆ shree krishna. Show all posts

Friday 20 December 2019

ಕಾಯೆ ಕಾಯೆ ಶ್ರೀ ಹರಿಜಾಯೆ ankita shree krishna

ಕಾಯೆ ಕಾಯೆ  ಶ್ರೀ ಹರಿಜಾಯೆ ||

ಕಾಯೆ ಕಾಯೆ ಸಂತೋಷವೀಯೆ ಮೂರು ಜಗ
ಕಾಯೆ ವಿಷ್ಣುಮನ ಛಾಯೆ ಭಕುತಿವರವೀಯೆ
ನಿತ್ಯ ಎಳೆಕಾಯೆ ಸುಜನಗಣ ಧ್ಯೇಯೆ
ನಿಗಮತತಿಗೇಯೆ ಮಾಯೆ ||

ಶರಣು-ಶರಣು-ಶರಣು ಗುಣಭರಣಿ
ಶರಣು ಭವ ತರಣೀ ಶರಣು ತ್ರಿಗುಣ ಧಣಿ
ಶರಣು ಸೊಬಗು ಖಣಿ ಶರಣು ನಿಗಮಧ್ವನಿ
ಶರಣು ಹರಿಯ ಮನಿ ಶರಣು ಸುಖದ ಮಣಿ
ಶರಣುಜಯ ಸಿರಿ ||

ಅಂಬೇ-ಅಂಬೇ-ಅಂಬೇ-ಅಂಬೇ ನಿರುತಹರಿ
ಕಾಂಬೆ ಉರದಲಿಹೆ ಎಂಬೆ ಪಡೆದೆ ಜಗ-
ವೆಂಬೆ ಭಕುತಿ ಜನಸ್ತಂಭೆ ಅಮಿತಶಶಿ
ಬಿಂಬೆ ಗೈವೆ ವಿಧಿ ಯಿಂಬೆ ತ್ರಿಗುಣ ಹರಿ
ಸೆಂಬೆ ನಮಿಪೆ ಕೃತಿ ||

ರಾಣೀ_ರಾಣೀ-ಶ್ರೀ ಅನಿರುದ್ಧನ ರಾಣಿ ಲಕ್ಷಣ
ಶ್ರೇಣಿ ಪಂಕಜಪಾಣಿ ಭುಜಂಗ ಸು-
ವೇಣಿ ನಿತ್ಯ ಕಲ್ಯಾಣಿ ಮಂಗಳವಾಣಿ ದುಃಖವ
ಕಾಣಿ ನೀ ಬಹು ಜಾಣಿ ವಲಿದಿಹ ಹರಿ ||

ಅಮ್ಮ-ಅಮ್ಮ-ನೀಜಗದಮ್ಮ ಅಮ್ಮ ಕಣ್ ತೆಗೆಯಮ್ಮ
ಸಿರಿಸುರಿಸಮ್ಮ ಉರಿಹರಿಸಮ್ಮ ದಯಮಾಡಮ್ಮ
ವಿಧಿಗುರುವಮ್ಮ ಭುಜಿಸೊಸೆಯಮ್ಮ
ಹರಿಗ್ಹೇಳಮ್ಮ ದಕ್ಷಣೆ ||

ಶೀಲೆ-ಶೀಲೆ- ನಿರುತ ಹರಿಯ ಜಪ ಶೀಲೆ ಕುಂಕುಮ
ಫಾಲೇ ಕಮಲಕಪೋಲೆ ಥಳ ಥಳ ವಾಲೆ ಇಟ್ಟಹೆ
ಬಾಲೇ, ಚಂಚಲ ಲೀಲೆ ನತಜನ ಪಾಲೆ
ಖಳರೆದೆಶೂಲೆ ಹರಿಗಿಹೆಮಾಲೆ ||

ಹೇತು-ಹೇತು-ಕಾರ್ಯ ಕಾರಣ ನೀ
ಒಡವೆಗಳಾಗಿ ವಸ್ತ್ರಗಳಾಗಿ ಶಸ್ತ್ರಗಳಾಗಿ
ಚರಣದಿ ಬಾಗಿ ಹರಿಗನುವಾಗಿ ಸಾಧಕಳಾಗಿ
ಧೊರೆವಶಳಾಗಿ ಗಂಡನ ಭಜಿಪೆ ||

ಇಲ್ಲ-ಇಲ್ಲ-ಹರಿಯಗಲಿಕೆ ನಿನಗಿಲ್ಲ
ಕ್ಲೇಶವು ಇಲ್ಲ ದೋಷಗಳಿಲ್ಲ ಪಾಶಗಳಿಲ್ಲ ಹರಿ ಬಿಡನಲ್ಲ
ಸರಿಯಾರಿಲ್ಲ ಮುಕ್ತರಿಗೆಲ್ಲ
ಒಡೆಯಳೆ ಚೆಲ್ವೆ ನೀ ಆಕಾಶೆ||

ನೀರೆ-ನೀರೆ-ಹರಿ ಸಮಾಸಮನೀರೆ
ಘನ ಗಂಭೀರೆ-ಶ್ರುತಿಗಳ ಮೇರೆ ಮೀರುತ
ಧೀರೆ ಹರಿಮನಸಾರೆ-ಪೊಗಳುವೆ ಬೇರೆ
ಸಾಟಿಯು ಯಾರೆ-ಹರಿಪುರ ತೋರೆ ಕರುಣದಿ ||

ಕಂದ-ಕಂದ-ನಾನಿಹೆ ನಿನ್ನ
ನಂದದ ಶ್ರೀ ಕೃಷ್ಣವಿಠಲನ ರಾಣಿ ಇಂದಿರೆಸಲಹೆ
ಕುಂದುಗಳಳಿಸೆ ತಂದೆಯ ತೋರೆ
ಚೆಂದದ ಭಕುತಿ ಮುಂದಕೆ ತಂದೂ ||
*****