Showing posts with label ಇಭರಾಮಪುರ ನಿಲಯ ನೀ ಎನ್ನ karpara narahari. Show all posts
Showing posts with label ಇಭರಾಮಪುರ ನಿಲಯ ನೀ ಎನ್ನ karpara narahari. Show all posts

Friday, 27 December 2019

ಇಭರಾಮಪುರ ನಿಲಯ ನೀ ಎನ್ನ karpara narahari

ಇಭರಾಮಪುರ ನಿಲಯ ನೀ ಎನ್ನ ಕಾಯೋ 
ಕೃಷ್ಣಾರ್ಯ ಗುರುವರ್ಯ ನೀ ಎನ್ನ ಕಾಯೋ ||ಪ||

ಅಶ್ವತ್ಥಾಮ ವರವಿತ್ತ ಸುರನೇ  ಕಾಯೋ |
ಭಜಿಪರಿಗೆ ವರವೀವ ಸುರಧೇನು ಕಾಯೋ ||೧||

ಪರಿಮಳಾಚಾರ್ಯರ ಪ್ರೀತಿ ಪಾತ್ರನೇ ಕಾಯೋ |
ಪರಿಮಳ ಮಹಿಮೆ ತೋರಿದವನೇ ಕಾಯೋ ||೨||

ವೀರನಾರಾಯಣ ಒಲಿದವನೆ ಕಾಯೋ| ಯೋಗಿನಾರಾಯಣರ ಪ್ರೀತಿಯ ಗುರುವೆ ಕಾಯೋ ||೩||

ಮಧ್ವಮತದ ಜ್ಞಾನ ನೀನಿತ್ತು ಕಾಯೋ|
ಹೊತ್ತು ಹೊತ್ತಿಗೆ ಹರಿ ಸ್ಮರಣೆ ಇತ್ತು ಕಾಯೋ||೪||

ಕೊಪ್ಪರ ನರಹರಿಯ ಭಜಿಪನೆ ಕಾಯೋ
ಪ್ರಾಣೇಶ ಮುದ್ದು ಶ್ರೀ ರಾಮನ ಪೂಜಿಪನೆ ಕಾಯೋ ||೫||
*********