RAO COLLECTIONS SONGS refer remember refresh render DEVARANAMA
kruti by Srida Vittala Dasaru Karjagi Dasappa
ಎಲೆ ಮನವೆ ಯದುಲಲಾಮನಗಲದೆ
ಭಲಾ ಭಲಾ ಎನಿಸನುಗಾಲಾ ಪ
ತನು ಮನ ಧನ ದಾರಾಪತ್ಯರ ನೀ
ನೆನಿಸದಿರಭಿಮಾನಕೆ ಮೂಲಾ 1
ಗುರುಹಿರಿಯರ ಸತ್ಕರಿಸಿ ಬ್ಯಾಗ ಪರಿ
ಹರಿಸಿಕೊ ಜನನ ಮರಣಜಾಲಾ 2
ಶ್ರೀದವಿಠ್ಠಲನ ಪಾದ ಸ್ಮರಣೆಯ
ಸಾಧಿಸು ಮುಕ್ತಾಮಣಿಮಾಲಾ 3
***