ಕಾಖಂಡಕಿ ಶ್ರೀ ಕೃಷ್ಣದಾಸರು
ಹಿಡಿಯಬೇಕು ಶ್ರೀ ಕೃಷ್ಣನ ತುಡುಗತನವ ಪ
ಕಡಿಯಗುಡದೆ ವೈವನು ಕೆನಿಮೊಸರ ತುಡುಗತನವನು ಮಾಡುವ ಬಲು ಹೆಸರ ಅಡಗಿಹ ಠಾವನೆ ತಾನುಸರ ಮಾಡಿ ತಾ ಕುಸರ 1
ಬಿಡಬಾರದು ಕಣ್ಣಿಲೆ ಕಟ್ಟಿ ಬಿಡಿಸಿಕೊಂಬುವ ಇವ ಬಲು ಜಗಜೆಟ್ಟಿ ಅಡಗಿಸಿಕೊಬೇಕು ಘಟ್ಟಿವಿಡಿದು ಮನಮುಟ್ಟಿ 2
ಸಾಧಿಸಿ ಸದ್ಗುರುದಯ ಕರುಣದಲಿ ಭೇದಿಸಿ ಹಿಡಿಯೊ ಮಹಿಪತಿ ಸುಮನದಲಿ ಒದಗಿಟ್ಟುಕೊ ನೀ ಹೃದಯದಲಿ ಇದೇ ನೋಡನುದಿನಲಿ 3
***