Showing posts with label ರಂಗ ಒಲಿದ ದಾಸರಾಯರ ಪಾದಪದುಮ gurujagannatha vittala. Show all posts
Showing posts with label ರಂಗ ಒಲಿದ ದಾಸರಾಯರ ಪಾದಪದುಮ gurujagannatha vittala. Show all posts

Wednesday, 1 September 2021

ರಂಗ ಒಲಿದ ದಾಸರಾಯರ ಪಾದಪದುಮ ankita gurujagannatha vittala

 ..


haridasaru

ರಂಗ ಒಲಿದ ದಾಸರಾಯರ - ಪಾದಪದುಮ

ಕಂಗಳಿಂದ ನೋಡಿದಾವರ - ಪಾಪಂಗಳೆಲ್ಲ

ಹಿಂಗಿಪೋಪವಲ್ಲೊ ಸತ್ವರಾ - ಏನು ಪೇಳಲಿವರಾ ಪ


ಮಂಗಳಾಂಗರಂಗನಿವರ ಅಂಗದೊಳಗೆ ನಿಂತು ಸದಾ

ತುಂಗ ಮಹಿಮೆ ತೋರಿ ಜನಕೆ

ಮಂಗಳಾವ ಕೊಡುವನಿಂಥಾ ಅ.ಪ


ಧರಣಿಸುರರ ಭಾವದಿಂದ ಧರಿಯ ತಳದಿ ಜನಿಸಿ ವಿಷ್ಣು

ಪರಮ ಭಕುತರೆನಿಸಿ ಸತತ -

ಹರುಷದಿಂದ ಕುಣಿದು ಕುಣಿದು

ಹರಿಯ ಮಹಿಮೆ ತುತಿಸಿ ಪಾಡುತಾ - ತಮ್ಮ ಮನದಿ

ಹರಿಯ ಮೂರ್ತಿಯನ್ನೇ ನೋಡುತಾ - ಸಾಧುಜನರ

ದುರಿತ ರಾಶಿ ದೂರಮಾಡುತಾ - ನಿತ್ಯದಲ್ಲಿ

ಹರುಷದಿಂದ ಸ್ತಂಭದೊಳಗೆ -

ಇರುವೆವೆಂಬ ಭಾವ ಜನಕೆ

ಅರುಹಿ ಜನರ ಈಪ್ಸಿತಾರ್ಥ ಕರೆದು ನೀಡಿ ಮೆರೆವೊರಿಂಥಾ 1


ಪರಮತತ್ವ ಸಾರಪುಂಜ - ಹರಿಕಥಾಮೃತಸಾರ

ಹರುಷದಿಂದ ರಚಿಸಿ ಹರಿಯ -

ಚರಣ ಭಜಿಪ ಜನಕೆ ಉಣಿಸಿ

ಪರಮ - ಗೋಪ್ಯ - ಭಾವ ತಿಳಿಸಿದಾ -

ಸಾಧು ಕುಲಕೆ

ಅರಿಪು ಮಾಡಿರೆಂದು ಪೇಳಿದಾ - ಮೂಢ ಜನಕೆ

ದೊರೆಯದೆಂದು ತಾನು ಪೇಳಿದಾ - ತನ್ನ ಜನಕೆ

ಪರದ ಸೌಖ್ಯ ಗರೆವ ಬಿಂಬ

ಕುರುಹು ನೋಳ್ಪ ಬಗೆಯ ಜನಕೆ

ಪರಮ ಸುಲಭ ತೋರಿ ಮುದದಿ

ಪರಿಪರಿಯಲಿ ಪೊರೆವೊರಿಂಥಾ 2


ಧಾತನಾಂಡ - ಮಧ್ಯದಲ್ಲಿ ಜಾತರಾದ ಸ್ವೀಯ ಜನರ

ಮಾತೆ - ಜನಕರಂತೆ ಅವರ ಮಾತ

ನಡಸಿಕೊಡುವ ಜಗ -

ನ್ನಾಥವಿಠಲನೊಲಿದನೀತಗೆ - ಜಗದಿ ತಾನು

ಖ್ಯಾತಿ ಪಡೆದು ಇರುವನೀತಗೆ ಸಮಾನನೆಂಬ

ನಾಥನಾಮ ಕಾಣೆನೆಂದಿಗೆ - ದಾಸಜನಕೆ

ನಾಥರೆನಿಸಿ ಜಗದಿ ಮಹಾ - ದಾತರಾಗಿ ಸಕಲಭೀಷ್ಠ -

ವ್ರಾತ ಸಲಿಸಿ ಗುರು ಜಗ -ನ್ನಾಥದಾಸ

ವಿಠ್ಠಲ ಪ್ರೀತಿಗೊಳಿಪರಿಂಥಾ 3

***