Showing posts with label ಸಲಹೋ ಸತ್ಯಬೋಧಾರ್ಯ ಸೀತಾರಾಮಚಂದ್ರರ ಸೇವಕ narasimha vittala. Show all posts
Showing posts with label ಸಲಹೋ ಸತ್ಯಬೋಧಾರ್ಯ ಸೀತಾರಾಮಚಂದ್ರರ ಸೇವಕ narasimha vittala. Show all posts

Saturday, 6 March 2021

ಸಲಹೋ ಸತ್ಯಬೋಧಾರ್ಯ ಸೀತಾರಾಮಚಂದ್ರರ ಸೇವಕ ankita narasimha vittala

 ಸಲಹೋ ಸತ್ಯಬೋಧಾರ್ಯ |ಸೀತಾರಾಮಚಂದ್ರರ ಸೇವಕ ಸಮೀರಮತಾಂಬುಧಿಚಂದ್ರ || 


ಸತ್ಯಪ್ರಿಯತೀರ್ಥರ ಕುವರ ಸಚ್ಛಾಸ್ತ್ರಗಳ ಬೋಧಕ ಶ್ರೀಸತ್ಯಬೋಧ ಗುರುವರ್ಯ ||............


 ದೋಷರಹಿತನ ದಯದಿ ವಿಷಯುಕ್ತ ನಿವೇದಿತ ಸುಪ್ರಸಾದವ ಸೇವಿಸಿದ ಶ್ರೀಸತ್ಯಬೋಧ ಗುರುವರ್ಯ ||...........



ತಮವ ಕಳೆವ ಸುಬೋಧಕ ದಿವಾಕರ ನಡುರಾತ್ರಿಯಲಿ ರವಿಯ ತೋರಿದ ಸುಧಾಕರ ಶ್ರೀಸತ್ಯಬೋಧ ಗುರುವರ್ಯ ||.......


ಸರ್ಪಶಯನ ಶ್ರೀನಿಧಿ ಸೀತಾರಮಣನ ಅರ್ಚನಾಫಲ ಸರ್ಪ ತೋರಿದ ನಿಧಿಯನಿತ್ತು ವರವಿತ್ತ ಶ್ರೀಸತ್ಯಬೋಧ ಗುರುವರ್ಯ ||..........


ವರವೃಕ್ಷದಡಿ ಗಂಗಾದೇವಿಯ ಪ್ರಾರ್ಥಿಸಲು ಒಲಿದು ಬಂದ ಸುರನದಿತೀರದಿ ಗಂಗಾಜನಕನ ಪೂಜಿಸಿದ ಶ್ರೀಸತ್ಯಬೋಧ ಗುರುವರ್ಯ ||..........


ಸತ್ಯನಾಮಕನನುಗ್ರಹದಿ ಸತ್ಯಸಂಧರಿಗಾಯುರ್ದಾನವ ಮಾಡಿದ   ರಾಹೇರನರಸಿಂಹ ವಿಠಲನ ಸೇವಕ ಶ್ರೀಸತ್ಯಬೋಧ ಗುರುವರ್ಯ ||..

***