ಸಲಹೋ ಸತ್ಯಬೋಧಾರ್ಯ |ಸೀತಾರಾಮಚಂದ್ರರ ಸೇವಕ ಸಮೀರಮತಾಂಬುಧಿಚಂದ್ರ ||
ಸತ್ಯಪ್ರಿಯತೀರ್ಥರ ಕುವರ ಸಚ್ಛಾಸ್ತ್ರಗಳ ಬೋಧಕ ಶ್ರೀಸತ್ಯಬೋಧ ಗುರುವರ್ಯ ||............
ದೋಷರಹಿತನ ದಯದಿ ವಿಷಯುಕ್ತ ನಿವೇದಿತ ಸುಪ್ರಸಾದವ ಸೇವಿಸಿದ ಶ್ರೀಸತ್ಯಬೋಧ ಗುರುವರ್ಯ ||...........
ತಮವ ಕಳೆವ ಸುಬೋಧಕ ದಿವಾಕರ ನಡುರಾತ್ರಿಯಲಿ ರವಿಯ ತೋರಿದ ಸುಧಾಕರ ಶ್ರೀಸತ್ಯಬೋಧ ಗುರುವರ್ಯ ||.......
ಸರ್ಪಶಯನ ಶ್ರೀನಿಧಿ ಸೀತಾರಮಣನ ಅರ್ಚನಾಫಲ ಸರ್ಪ ತೋರಿದ ನಿಧಿಯನಿತ್ತು ವರವಿತ್ತ ಶ್ರೀಸತ್ಯಬೋಧ ಗುರುವರ್ಯ ||..........
ವರವೃಕ್ಷದಡಿ ಗಂಗಾದೇವಿಯ ಪ್ರಾರ್ಥಿಸಲು ಒಲಿದು ಬಂದ ಸುರನದಿತೀರದಿ ಗಂಗಾಜನಕನ ಪೂಜಿಸಿದ ಶ್ರೀಸತ್ಯಬೋಧ ಗುರುವರ್ಯ ||..........
ಸತ್ಯನಾಮಕನನುಗ್ರಹದಿ ಸತ್ಯಸಂಧರಿಗಾಯುರ್ದಾನವ ಮಾಡಿದ ರಾಹೇರನರಸಿಂಹ ವಿಠಲನ ಸೇವಕ ಶ್ರೀಸತ್ಯಬೋಧ ಗುರುವರ್ಯ ||..
***
No comments:
Post a Comment