Saturday, 6 March 2021

ನಂದನಂದನ ಸುಂದರಾ ನವನೀತ ಚೋರಾ ankita gururama vittala

 ರಾಗ - : ತಾಳ -


ನಂದ ನಂದನ ಸುಂದರಾ ನವನೀತ ಚೋರಾ ll ಪ ll


ಚಂದ್ರ ಸಹೋದರಿ ಮಾನಸ ಚಕೋರ

ಚಂದ್ರ ಚಂದ್ರ ಕುಲಚಂದ್ರ ಚಂದ್ರಮುಖ ll ಅ ಪ ll 


ಸೂರಿಜನಪ್ರಿಯ ಸುಗುಣನಿಲಯ ಪಾ 

ಕಾರಿಗರ್ವಹರ ಕರುಣಾ ಜಲಧೇ ll ೧ ll


ಮೃದ್ಭಕ್ಷಣಾದಿ ಚಿದ್ವಿಲಾಸನದ 

ಸದ್ವಿಹಾರ ದೇವ ದ್ವಿಜ ಪೋಷಕ ll ೨ ll


ರಾಮಾನುಜ ಭೃಗು ರಾಮತ್ರಿಜಗದಭಿ 

ರಾಮಪಾಹಿ ಗುರುರಾಮವಿಟ್ಠಲ ಜಯ ll ೩ ll

***


No comments:

Post a Comment