Saturday, 6 March 2021

ಗತಿಯೆಂದು ನಂಬಿದೆ ನಿನ್ನ ಕಾಯೊ ಎನ್ನ ankita gururama vittala

 ರಾಗ - : ತಾಳ - 


ಗತಿಯೆಂದು ನಂಬಿದೆ ನಿನ್ನ ಕಾಯೊ ಎನ್ನ l ಲಕ್ಷ್ಮೀ

ಪತಿಯೆ ಪುರುಷೋತ್ತಮ ವಿಶ್ವಮೋಹನ್ನ ll ಪ ll


ಗತಿಯಿಲ್ಲದವರಿಗೆ ಗತಿನೀನಲ್ಲವೆ ಸ್ವಾಮಿ

ಸತತನಿನ್ನಯ ಪಾದಾಶ್ರಿತರಲ್ಲವೆ ನಾವು ll ಅ ಪ ll


ಅಗಣಿತಗುಣಪೂರ್ಣನೆಂದು ದೀನಬಂಧು l ಸ

ರ್ವಗ ಸರ್ವಾಂತರ್ಯಾಮೀ ಮೊರೆಹೊಕ್ಕೆನಿಂದು 

ಜಗದಾದಿಕಾರಣ ಜಲಜಾತನಯನ ಪ

ನ್ನಗರಾಜಶಯನ ಪ್ರಸನ್ನ ವತ್ಸಲ ಶೌರಿ ll ೧ ll


ವಾಸುದೇವಾಚ್ಯುತಾನಂತಾದಿ ಮಧ್ಯಾಂತ ರಹಿತ 

ವಾಸುದೇವಾನುಜ ಸರ್ವಾಧೀಶ ಶ್ರೀಕಾಂತ

ನಾಶರಹಿತ ಪರಮಾತ್ಮ ಪಾಪವಿದೂರ

ನಾಥನು ನೀನು ಅನಾಥರಿಗೆಲ್ಲ ll ೨ ll


ಸ್ಮರಿಸಿದವರ ಕಷ್ಟಗಳನು ಬಿಡಿಸುವೆ 

ಶರಣಾಗತ ರಕ್ಷಾನತ ಸುರಧೇನು

ಗುರುರಾಮವಿಟ್ಠಲ ಕರುಣಾಸಾಗರನು ಎಂ

ದರಿತು ನಿನ್ನಡಿಗಳ ಭಜಿಸಿ ಬೇಡುವೆನು ll ೩ ll

***


No comments:

Post a Comment