Audio by Vidwan Sumukh Moudgalya
ಶ್ರೀ ವಿದ್ಯಾಪ್ರಸನ್ನತೀರ್ಥರ ರಚನೆ
ರಾಗ : ಸಾರಮತಿ ಆದಿತಾಳ
ಬಾದರಾಯಣ ಪಾದಕೆರಗಿದೆನೊ ॥ಪ॥
ನೀ ದಯದಿ ಕಾಮಕ್ರೋಧಗಳನೇ ಬಿಡಿಸಿ
ಸಾಧು ಕರ್ಮದಲ್ಲಿ ಆದರವೀಯೋ ॥ಅ.ಪ॥
ಜ್ಞಾನಿ ಗೌತಮ ಮೌನಿ ಶಾಪದಿಂದ
ಜ್ಞಾನಿಗಳಿಗೆ ಅಜ್ಞಾನತೆ ಬರಲು
ದೈನ್ಯದಲಿ ಚತುರಾನನಾದಿಗಳು
ನೀನೆ ಗತಿಯೆನಲು ಮಾನಿಸಿದ ಸುಖಾತ್ಮ ॥೧॥
ತಾಪಸೋತ್ತಮ ಆ ಪರಾಶರರು
ದ್ವೀಪದಲ್ಲಿರಲು ನೀ ಪವಳಿಸಿದೆ
ಶಾಪದಿಂದ ಕ್ರಿಮಿ ರೂಪಪೊಂದಿದವಗೆ
ಭೂಪತನವನಿತ್ತ ದ್ವೈಪಾಯನಾಖ್ಯ ॥೨॥
ಶೃತಿಗಳರ್ಥ ಮಂದ ಮತಿಗಳರಿಯದಿರೆ
ಹಿತದಿ ಬ್ರಹ್ಮಸೂತ್ರ ತತಿಗಳನ್ನೆ ರಚಿಸಿ
ಅತುಲವಾದ ಭಾಗವತ ವರಮಹಾ-
ಭಾರತಗಳನ್ನು ರಚಿಸಿ ಅತಿ ಪ್ರಸನ್ನ ರಾದ ॥೩॥
*******
No comments:
Post a Comment