Showing posts with label ಭೂತರಾಜರ ಸ್ತುತಿಸಿ ಖ್ಯಾತಿಗೊಳ್ಳೊ tandeshreenarahari. Show all posts
Showing posts with label ಭೂತರಾಜರ ಸ್ತುತಿಸಿ ಖ್ಯಾತಿಗೊಳ್ಳೊ tandeshreenarahari. Show all posts

Thursday 5 August 2021

ಭೂತರಾಜರ ಸ್ತುತಿಸಿ ಖ್ಯಾತಿಗೊಳ್ಳೊ ankita tandeshreenarahari

 ..

kruti by tandeshreenarahari

ಭೂತರಾಜರ ಸ್ತೋತ್ರ

ಭೂತರಾಜರ ಸ್ತುತಿಸಿ ಖ್ಯಾತಿಗೊಳ್ಳೊ ಪ


ಪ್ರೀತಿ ಇವರಲಿ ಅಧಿಕ ವಾದಿರಾಜರಿಗೆ ಅ.ಪ.


ಆತನಾಜ್ಞೆಯಿಂದ ಧರಿಸಲುಕೋತಿಯಂತೆ ಹುಬ್ಬು ಏಕೆ ಹಾರಿಸುವೆಜ್ಯೋತಿ ಸ್ವರೂಪಕ್ಕೆ ಬೂದಿಯು ಮುಸುಕಲುಪಾತಕಿಯು ತಾ ಮುಟ್ಟಿ ಬೊಚ್ಬಿ ಬಾರಿಸನೆ 1

ಗುರುಸೇವೆ ಇವರಂತೆ ಮಾಡ್ದವರು ಯಾರುಂಟುಗುರುಕೃಪಾ ಇವರಂತೆ ಪಡೆದವರು ಯಾರೊಅರಿತು ನೋಡಲು ನಿರುತ ರತಿಗೆ ಕಾರಣವುಂಟುನರಕುರಿ ಇದರ ಮರ್ಮವ ತಿಳಿವದುಂಟೆ 2

ಇಂದಿಗೂ ಸೋದೇಲಿ ಇವರದೇ ಗುರುಪೂಜೆಸುದ್ದಿ ಸುಳ್ಳೆಂದವಗೆ ದೆಬ್ಬೆ ಪೂಜಾಸದ್ದಿಲ್ಲದಿವರಡಿ ಸ್ಮರಿಸುವುದೇ ಗುರುಪೂಜಾತಂದೆ ಶ್ರೀ ನರಹರಿ ಒಪ್ಪುವಾ ಪೂಜಾ 3

***