ರಾಘವೇಂದ್ರ ಗುರುರಾಯಾ ನೀ ವೇಗದಿ ಪಿಡಿ ಎನ್ನ ಕೈಯ್ಯಾ ಪ
ಆಗಾಮಿ ಸಂಚಿತ ಭೊಗಗಳುಳ್ಳ ಭವ-
ಸಾಗರದಲ್ಲಿ ಬಿದ್ದೆ ವೇಗದಿ ನೀ ಬಂದು ಅ.ಪ
ಭಾವ ದ್ರವ್ಯ ಕ್ರಿಯಾದ್ವೈತ ಇದರನುಭಾವವ ತಿಳಿಯದೆ ನಿರುತ
ಸೇವಿಪ ಸಂತತ ಈವಿಧ ನರರನು
ದೇವರೆಂದನುದಿನ ಭಾವಿಸಿದೆನ್ನನು 1
ಅಶನ ವಸನಕಾಗಿ ನಾ ಪರವಶದಲಿ ಶಿರಬಾಗಿ
ಅಸಮ ನಿನ್ನಯ ಪಾದ ಬಿಸಜ ಭಜಿಸದೆ ನಾ
ವಸುಮತಿಯೊಳು ಬಲು ಹಸನಗೆಟ್ಟೆನ್ನನು 2
ಶಿರಿವರ ಗುರುಜಗನ್ನಾಥವಿಠಲನ ಪರಿಸರವರನಾಥ
ಸರಿಯೆನಿಸಿದ ನಿನ್ನ ಪರಿಚರರೊಳು ಎನ್ನ
ಮರೆಯದೆ ದಯದಲಿ ಪೊರೆವೊದು ಎನ್ನನು1 3
***
ರಾಗ: ಸುರಟಿ ತಾಳ: ಆದಿ /ಏಕ (raga, taala may differ in audio)