Tuesday 5 October 2021

ರಾಘವೇಂದ್ರ ಗುರುರಾಯಾ ನೀ ವೇಗದಿ ankita gurujagannatha vittala RAGHAVENDRA GURURAYA NEE VEGADI



ರಾಘವೇಂದ್ರ ಗುರುರಾಯಾ ನೀ ವೇಗದಿ ಪಿಡಿ ಎನ್ನ ಕೈಯ್ಯಾ

ಆಗಾಮಿ ಸಂಚಿತ ಭೊಗಗಳುಳ್ಳ ಭವ-

ಸಾಗರದಲ್ಲಿ ಬಿದ್ದೆ ವೇಗದಿ ನೀ ಬಂದು ಅ.ಪ

ಭಾವ ದ್ರವ್ಯ ಕ್ರಿಯಾದ್ವೈತ ಇದರನುಭಾವವ ತಿಳಿಯದೆ ನಿರುತ

ಸೇವಿಪ ಸಂತತ ಈವಿಧ ನರರನು

ದೇವರೆಂದನುದಿನ ಭಾವಿಸಿದೆನ್ನನು 1

ಅಶನ ವಸನಕಾಗಿ ನಾ ಪರವಶದಲಿ ಶಿರಬಾಗಿ

ಅಸಮ ನಿನ್ನಯ ಪಾದ ಬಿಸಜ ಭಜಿಸದೆ ನಾ

ವಸುಮತಿಯೊಳು ಬಲು ಹಸನಗೆಟ್ಟೆನ್ನನು 2

ಶಿರಿವರ ಗುರುಜಗನ್ನಾಥವಿಠಲನ ಪರಿಸರವರನಾಥ

ಸರಿಯೆನಿಸಿದ ನಿನ್ನ ಪರಿಚರರೊಳು ಎನ್ನ

ಮರೆಯದೆ ದಯದಲಿ ಪೊರೆವೊದು ಎನ್ನನು1 3

***

 ರಾಗ: ಸುರಟಿ ತಾಳ: ಆದಿ /ಏಕ (raga, taala may differ in audio)


No comments:

Post a Comment