Showing posts with label ಸ್ಮರಿಸುವೊ ಜನರಿಗೆ ಸಲಹುವ ದೊರೆಗಳಿನ್ನುಂಟೇ ವೆಂಕಟೇಶಾ tandevaradagopala vittala. Show all posts
Showing posts with label ಸ್ಮರಿಸುವೊ ಜನರಿಗೆ ಸಲಹುವ ದೊರೆಗಳಿನ್ನುಂಟೇ ವೆಂಕಟೇಶಾ tandevaradagopala vittala. Show all posts

Thursday, 5 August 2021

ಸ್ಮರಿಸುವೊ ಜನರಿಗೆ ಸಲಹುವ ದೊರೆಗಳಿನ್ನುಂಟೇ ವೆಂಕಟೇಶಾ ankita tandevaradagopala vittala

 ..

kruti: tandevaradagopala vittala (ಪ್ರಹ್ಲಾದಗೌಡರು)


ಸ್ಮರಿಸುವೊ ಜನರಿಗೆ ಸಲಹುವ ದೊರೆಗಳಿನ್ನುಂಟೇ ವೆಂಕಟೇಶಾ ಪ


ಕರುಣಾನಿಧಿ ಮಹಾಮಹಿಮ ನೀನೆಂದು ನಾ ನಂಬಿದೆವೆಂಕಟೇಶಾ ಅ.ಪ.


ಬರಿದು ದಂಡಿಸಿ ನಿನ್ನ ಪದ ಹೊಂದುವ ಬಗೆ ತೋರೋವೆಂಕಟೇಶಾ ಬಾಧೆಯ ತಾಳದೆ ಹಾದಿಯ ತಪ್ಪಿದೆ ವೆಂಕಟೇಶಾ 1

ಮಾರಿ ಮುಸುಕಿ ಎನ್ನ ಗಾರು ಮಾಡದೆ ವೆಂಕಟೇಶಾಘೋರ ಜಾರದ ವಾರಿಧಿಯಲಿ ನಾ ಮುಳುಗಿದೆ ವೆಂಕಟೇಶಾ 2

ಪಾರುಗಾಣದೆ ನಿನ್ನ ಮರೆಹೊಕ್ಕೆನೋ ವೆಂಕಟೇಶಾನಾನಾಗಿ ನಿನ್ನ ಗಣ್ಮ್ರತಗರಿಯೊ ವೆಂಕಟೇಶಾ 3

ಚೋರರ ಬಾಧೆಗೆ ಚೀರಿ ಚೀರುತಲಿಹೆನೊ ವೆಂಕಟೇಶಾದೂರ ನೋಡದಿರು ದಾಸರ ದೂತ ವೆಂಕಟೇಶಾ 4

ಹತ್ತು ಒಂಬತ್ತು ವತ್ಸರದಿಂದ ಕುಂಭಿಯೊಳಿದ್ದೆ ವೆಂಕಟೇಶಾಇನ್ನೆಂತು ಪೊಗಳಲಿ ನಿನ್ನ ಕರುಣವು ಬಾರದೆ ವೆಂಕಟೇಶಾ 5

ಕುಂಕುಮ ಅಂಕಿತ ಪದಪಂಕಜ ಶೋಭಿತ ವೆಂಕಟೇಶಾಕಂದನೆಂದು ಪೊರೆಯದಿರೆ ಬಿರಿದುಂಟೆ ವೆಂಕಟೇಶಾ 6

ಜ್ಞಾನದಿ ನಿನ್ನ ಧ್ಯಾನಿಪಲೊಲ್ಲೆ ವೆಂಕಟೇಶಾತೇಜ ತಂದೆವರದಗೋಪಾಲವಿಠಲ ವೆಂಕಟೇಶಾ 7

***