Showing posts with label ನಮ್ಮಯ್ಯ ಗುರು ನಾ ನಿಮ್ಮ ಮನಿಯ ಶ್ವಾನ mahipati. Show all posts
Showing posts with label ನಮ್ಮಯ್ಯ ಗುರು ನಾ ನಿಮ್ಮ ಮನಿಯ ಶ್ವಾನ mahipati. Show all posts

Wednesday, 11 December 2019

ನಮ್ಮಯ್ಯ ಗುರು ನಾ ನಿಮ್ಮ ಮನಿಯ ಶ್ವಾನ ankita mahipati

by ಮಹಿಪತಿದಾಸರು
ಭೀಮಪಲಾಸ್ ರಾಗ ತೀನ್ ತಾಳ

ನಮ್ಮಯ್ಯ ಗುರು ನಾ ನಿಮ್ಮ ಮನಿಯ ಶ್ವಾನ
ಹೆಮ್ಮೆಯೆಂಬ ಹಲ್ಲು ಮುರಿದೆ ಪೂರ್ಣ
ಸುಮ್ಮನಿರುವೆ ಕಂಡು ಸಂತತ ಚರಣ
ಒಮ್ಮನದಿಂದೆ ತೃಪ್ತ್ಯಾಯಿತು ಜೀವನ ||೧||

ಸದ್ಬೋಧವನ್ನ ನೀಡಲು ಓಡಿಬಂದೆ
ಸದ್ಗುರುವೆ ಒಡೆಯ ನೀನಹುದೆಂದೆ
ಬಿದ್ದುಕೊಂಡಿಹೆ ನಾ ನಿಮ್ಮ ಮನೆಯ ಮುಂದೆ
ಬುದ್ಧಿವಂತರ ಬೆನ್ನಟ್ಟಿ ಹೋಗೆ ಹಿಂದೆ ||೨||

ಹಳಿಯೆಂದರೆ ನಾ ಹೋಗೆ ಎಂದೆಂದಿಗೂ ಬಿಟ್ಟು
ಕೇಳಿಕೊಂಡಿಹೆ ಗುಹ್ಯವಾಕ್ಯದ ಹೆಜ್ಜಿ ಮೆಟ್ಟು
ಸುಳುವುದೋರಲು ನಿಮ್ಮ ಸದ್ಗತಿ ಮುಕ್ತಿಯುಂಟು
ತಿಳದ್ಹಾಕಿದೆ ನಾ ನಿಮ್ಮ ಪಾದರಕ್ಷಕೆ ಗಂಟು ||೩||

ಬಾಗಿಲ ಕಾಯಿಕೊಂಡು ಬಿದ್ದಿಹ ನಿಮ್ಮ ಶ್ವಾನ
ಹಗಲಿರುಳು ನಾ ಬೊಗಳುವೆ ನಿಜಗುಣ
ಜಾಗಿಸುವದೆನ್ನೊಳು ನಮ್ಮಯ್ಯ ನಿಮ್ಮ ಖೂನ
ಸುಗಮದಿಂದ ದೊರೆಯಿತು ನಿಜಸ್ಥಾನ ||೪||

ಹಿಡಿದು ಕಚ್ಚಿಹೆ ನಿಮ್ಮ ಪಾದರಕ್ಷೆ ಸಂಪೂರ್ಣ
ಬಿಡೆ ಎಂದೆಂದು ನಾ ಹೋದರೆ ಜೀವ ಪ್ರಾಣ
ಪಿಡಿದು ಮಾಡುವೆ ನಾ ಜತನ
ಮೂಢ ಮಹಿಪತಿಗಿದೇ ಸುಖ ಸಾಧನ ||೫||
****

ಕಾಖಂಡಕಿ ಶ್ರೀ ಮಹಿಪತಿರಾಯರು

ನಮ್ಮಯ್ಯ ಗುರು ನಾ ನಿಮ್ಮ ಮನಿಯ ಶ್ವಾನ ಹೆಮ್ಮೆಯೆಂಬ ಹಲ್ಲು ಮುರಿದೆ ಪೂರ್ಣ ಸುಮ್ಮನಿರುವೆ ಕಂಡು ಸಂತತ ಚರಣ ಒಮ್ಮನದಿಂದೆ ತೃಪ್ತ್ಯಾಯಿತು ಜೀವನ 1 

ಸದ್ಭೋಧದನ್ನ ನೀಡಲು ಓಡಿಬಂದೆ ಸದ್ಗುರುವೆ ಒಡೆಯ ನೀನಹುದೆಂದೆ ಬಿದ್ದುಕೊಂಡಿಹೆ ನಾ ನಿಮ್ಮ ಮನೆಯ ಮುಂದೆ ಬುದ್ಧಿವಂತರು ಬೆನ್ನಟ್ಟಿ ಹೋಗೆ ಹಿಂದೆ 2 

ಹಳಿಯೆಂದರೆ ನಾ ಹೋಗೆ ಎಂದೆಂದಿಗೂ ಬಿಟ್ಟು ಗುಹ್ಯ ವಾಕ್ಯದ ಹೆಜ್ಜೆ ಮೆಟ್ಟು ಸುಳವುದೋರಲು ನಿಮ್ಮ ಸದ್ಗತಿ ಮುಕ್ತಿಯುಂಟು ತಿಳದ್ಹಾಕಿಹನಾ ನಿಮ್ಮ ಪಾದರಕ್ಷಕೆ ಗಂಟು 3 

ಬಾಗಿಲಕಾಯಿಕೊಂಡು ಬಿದ್ದಿಹ್ಯ ನಿಮ್ಮ ಶ್ವಾನ ಹಗಲಿರುಳು ನಾ ನಿಮ್ಮ ಬೊಗುಳವೆ ನಿಜಗುಣ ಜಾಗಿಸುವದೆನ್ನೊಳು ನಮ್ಮಯ್ಯ ನಿಮ್ಮ ಖೂನ ಸುಗುಮದಿಂದ ದೊರೆಯಿತು ನಿಜ ಸ್ಥಾನ 4 

ಹಿಡಿದು ಕಚ್ಚಿಹೆ ನಿಮ್ಮ ಪಾದರಕ್ಷ ಸಂಪೂರ್ಣ ಬಿಡೆ ಎಂದೆಂದು ನಾ ಹೋದರೆ ಜೀವ ಪ್ರಾಣ ಪಿಡಿದು ಮಾಡುವೆ ನಾ ಜತನ ಮೂಢ ಮಹಿಪತಿಗಿದೆ ಸುಖಸಾಧನ 5

****